ಕಾರ್ಕಳದ ಮಾಜಿ ಶಾಸಕ, ದಿವಂಗತ ಗೋಪಾಲ ಭಂಡಾರಿ ಅವರ ಪುತ್ರ, ಉದ್ಯಮಿ ಸುದೀಪ್ ಭಂಡಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ರಾತ್ರಿ ಬಾರ್ಕೂರು ಬಳಿ ರೈಲಿಗೆ ತಲೆಕೊಟ್ಟು ಅವರು ಸಾವಿಗೆ ಶರಣಾಗಿದ್ದಾರೆ. ಅವರ ಛಿದ್ರಗೊಂಡ ಮೃತದೇಹ ಬಾರಕೂರು ಸಮೀಪದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸುದೀಪ್ ಭಂಡಾರಿ ಅವರ ದೇಹ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.
ಕಾರ್ಕಳದ ಮಾಜಿ ಶಾಸಕ, ದಿವಂಗತ ಗೋಪಾಲ ಭಂಡಾರಿ ಅವರ ಪುತ್ರ ಹಾಗೂ ಉದ್ಯಮಿ ಸುದೀಪ್ ಭಂಡಾರಿ ಹೆಬ್ರಿಯಲ್ಲಿ ಬಾರ್‌ವೊಂದನ್ನು ನಡೆಸುತ್ತಿದ್ದ ಸುದೀಪ್ ಭಂಡಾರಿ, ವ್ಯವಹಾರದಲ್ಲಿನ ತೀವ್ರ ಆರ್ಥಿಕ ನಷ್ಟವೇ ಆತ್ಮಹತ್ಯೆಗೆ ಕಾರಣ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಸೋಮವಾರ ರಾತ್ರಿ 7:15ರ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕುಟುಂಬಸ್ಥರು ಮತ್ತು ಸ್ನೇಹಿತರು ಹುಡುಕಾಟ ನಡೆಸಿದಾಗ ಬಾರ್ಕೂರು ಸಮೀಪದ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.





