ರಾಜ್ಯದ ರಾಜಕಾರಣದಲ್ಲಿ ಸುಂಟರಗಾಳಿಯಂತೆ ಇದೀಗ RSS ಗೆ ಸಂಬಂಧಿತ ಸುದ್ದಿ ಗಿರಕಿ ಹೊಡೆಯುತ್ತಿದೆ.
RSS ಚಟುವಟಿಕೆ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿದ್ದೆ ತಡ, ರಾಜಕೀಯ ನಾಯಕರು ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ದೇಶದಲ್ಲಿ ಒಟ್ಟು ಮೂರು ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ನಿಷೇಧ ಹೇರಲಾಗಿದೆ.
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮೇಲೆ ನಾಥುರಾಮ್ ಗೋಡ್ಸೆ ಗುಂಡು ಹಾರಿಸಿದ ನಂತರ RSS ಸಂಘಟನೆಯನ್ನು ನಿಷೇಧಿಸಲಾಗಿತ್ತು. 1948 ರ ಫೆಬ್ರವರಿ 4 ರಲ್ಲಿ ನಿಷೇಧ ಮಾಡಲಾಗಿತ್ತು.
ಆಗ ಪ್ರಧಾನಿ ಜವಾಹರಲಾಲ್ ನೆಹರು ಸಂಪುಟದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಗೃಹ ಸಚಿವರಾಗಿದ್ದರು.
ಈ ನಿಷೇಧವನ್ನು 1949 ರ ಜುಲೈನಲ್ಲಿ ತೆಗೆದು ಹಾಕಲಾಗಿತ್ತು.
ನಂತರ 1975 ರ ಜೂನ್ 25 ರಂದು ಆಗಿನ ಪ್ರಧಾನಿ ತುರ್ತು ಪರಿಸ್ಥಿತಿ ಹೇರಿದ್ದರು. ಈ ವೇಳೆ ಜಯಪ್ರಕಾಶ್ ನಾರಾಯಣ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಸಾಂಘಿಕ ಹೋರಾಟ ನಡೆದಿತ್ತು. ಈ ಹೋರಾಟದಲ್ಲಿ RSS ನಾಯಕರು ಭಾಗವಹಿಸಿದ್ದರು. RSS ಮುಖಂಡ ಬಾಳಾಸಾಹೇಬ್ ದೇವರಸ್ ಸೇರಿದಂತೆ ಅನೇಕ ಮುಖಂಡರನ್ನು ಬಂಧಿಸಲಾಗಿತ್ತು. ಅಲ್ಲದೇ RSS ಸಂಘಟನೆ ಮೇಲೆ ನಿಷೇಧ ಹೇರಲಾಗಿತ್ತು.
ಬಾಬರಿ ಮಸೀದಿ ಧ್ವಂಸ ಮಾಡಿದಾಗ ಆಗಿನ ಪ್ರಧಾನಿಯಾಗಿದ್ದ ಪಿ ವಿ ನರಸಿಂಹರಾವ್ 1992 ರ ಡಿಸೆಂಬರ್ ನಲ್ಲಿ RSS ಮೇಲೆ ನಿಷೇಧ ಹೇರಲಾಗಿತ್ತು. ನಂತರ 1993 ಜುಲೈ 22 ರಂದು RSS ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿತ್ತು.
ಹೀಗೆ ಒಟ್ಟು ಮೂರು ಬಾರಿ RSS ಮೇಲೆ ನಿಷೇಧ ಹೇರಲಾಗಿತ್ತು





