ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿಷೇಧಿಸುವಂತೆ ಹೇಳಿದ ಪ್ರಿಯಾಂಕ್ ಖರ್ಗೆa ಹೇಳಿಕೆ, ರಾಜಕಾರಣದಲ್ಲಿ ಪರಸ್ಪರ ಕೆಸರೆರಚಾಟಕ್ಕೆ ಕಾರಣವಾಗಿದೆ.
ಇದೀಗ ಸಚಿವ ಪ್ರಿಯಾಂಕ್ ಖರ್ಗೆಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.
ಬಿಜೆಪಿ ಸರ್ಕಾರ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂದಿನ ಆಯುಕ್ತರಾಗಿದ್ದ ಎಸ್ ಆರ್ ಉಮಾಶಂಕರ ದಿನಾಂಕ 07-02-2013 ರಂದು ಹೊರಡಿಸಿದ ನಿಷೇಧ ಹೇರಿರುವ ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ.

ಈ ಆದೇಶದಲ್ಲಿ ಉಲ್ಲೇಖಿಸಿದಂತೆ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಮೈದಾನವನ್ನು ನೀಡದಂತೆ ಉಲ್ಲೇಖಿಸಲಾಗಿದೆ.

ನನ್ನ ಹೇಳಿಕೆಯನ್ನು ದೊಡ್ಡ ರಾದ್ದಾಂತ ಮಾಡಿರುವ ಬಿಜೆಪಿ ನಾಯಕರು, ನಿಮ್ಮ ಸರ್ಕಾರವೇ ಇಂತಹ ಆದೇಶ ಹೊರಡಿಸಿದ್ದನ್ನು ಗಮನಿಸಲಿ ಎಂದು ತೀರುಗೇಟು ನೀಡಿದ್ದಾರೆ.
Author: Karnataka Files
Post Views: 2





