ಧಾರವಾಡದಲ್ಲಿ ಆಸ್ತಿ ಲಪಟಾಯಿಸುವ ಉದ್ದೇ ಶದಿಂದ ಡೂಪ್ಲಿಕೇಟ್ ಆಧಾರ ಕಾರ್ಡ್ ಮಾಡುವ ಮಾಫಿಯಾ ಒಂದು ಕೆಲಸ ಮಾಡುತ್ತಿದೆ.
ಮುಂಬೈ ನಗರದ ಆಶೀಸ್ ಶಶಿಕಾಂತ್ ಹೊನ್ನಾವರ ಎಂಬಾತ ಧಾರವಾಡದಲ್ಲಿನ ತನ್ನ ಅಜ್ಜನ ಆಸ್ತಿ ಹೊಡೆಯಲು ನಕಲಿ ಆಧಾರ್ ಕಾರ್ಡ್ ಮಾಡಿಸಿರುವದು ಬೆಳಕಿಗೆ ಬಂದಿದೆ.
ಸುಮಾರು 3 ಕೋಟಿ ಮೌಲ್ಯದ ಆಸ್ತಿಯನ್ನು ನಕಲಿ ಆಧಾರ ಕಾರ್ಡ್ ಮೇಲೆ ವಂಶಾವಳಿ ಪ್ರಮಾಣ ಪತ್ರ ಪಡೆದು ವಂಚನೆ ಮಾಡಿದ್ದಾನೆ.
ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿರುವ ಸರ್ಕಲ್ ಗುರು ಸುಣಗಾರ, ಅಜ್ಜ ಹಾಗೂ ಅಜ್ಜನ ಜಂಟಿ ಖಾತೆಯಲ್ಲಿರುವ ಆಸ್ತಿಗೆ ಈತನೇ ವಾರಸುದಾರ ಎಂದು ಹೇಳಿ ವರದಿ ಒಪ್ಪಿಸಿದ್ದಾರೆ.
ಸನ್ಮತಿ ನಗರ 2ನೇ ಕ್ರಾಸ್ ಧಾರವಾಡ ಎಂಬ ಹೆಸರಿನಲ್ಲಿ ನಕಲಿ ಆಧಾರ ಕಾರ್ಡ್ ಕೊಟ್ಟು ಆಸ್ತಿ ಲಪಟಾಯಿಸಿದ ಆಶೀಶ್ ಹೊನ್ನಾವರ ಹಾಗೂ ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಗುರು ಸುಣಗಾರ ವರದಿ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿವೆ.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಂತಹ ಖಡಕ್ ಜಿಲ್ಲಾಧಿಕಾರಿ ಇರುವಾಗ ಹಾಗೂ ಮಾಜಿ ಸೈನಿಕ ಅಧಿಕಾರಿಯಾಗಿ, ಇದೀಗ ಧಾರವಾಡ ತಹಸೀಲ್ದಾರ್ ಆಗಿರುವ ಹೂಗಾರ್ ಏನು ಮಾಡುತ್ತಿದ್ದಾರೆ ಅನ್ನೋದೆ ಯಕ್ಷಪ್ರಶ್ನೆಯಾಗಿದೆ.





