ಕೊಪ್ಪಳ ಜಿಲ್ಲೆಯಲ್ಲಿ ದಲಿತರ ಮೇಲಿನ ಹಲ್ಲೆ ಮುಂದುವರೆದಿದ್ದು, ನಿನ್ನೆ ಪಿಎಸ್ಐ ಗುರುರಾಜ್, ದಲಿತ ಮುಖಂಡ ಗಾಳೆಪ್ಪ ಹಿರೇಮನಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ.
ಅತ್ಯಂತ ಕೀಳು ನಿಂದನೆಯಿಂದ ಹಲ್ಲೆ ನಡೆಸಿ, “ನೀವು ದಲಿತರು 500 ರೂಪಾಯಿಗೆ ಕೀಳು ಕೆಲಸ ಮಾಡುತ್ತೀರಿ; ನಾನು ನಿಮ್ಮಿಂದ ಕಲಿಯಬೇಕಾಗಿಲ್ಲ” ಎಂದು ಜಾತಿ ನಿಂದನೆ ಮಾಡಿದ್ದರ ಪರಿಣಾಮ, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಈ ವಿಷಯಕ್ಕೆ ಸಂಬಂಧಿಸಿದಂತೆ, ಕೊಪ್ಪಳ ಜಿಲ್ಲೆಯ ಕುಕನೂರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (PSI) ಗುರುರಾಜ ಅವರನ್ನು ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Author: Karnataka Files
Post Views: 1





