ವಿಜ್ಞಾನ ತಂತ್ರಜ್ಞಾನ ಬೆಳೆದಂತೆಲ್ಲ ಸೈಬರ್ ಕ್ರೈಮ್ ಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ.
ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ವಂಚಿಸುವ ಜಾಲ ದೇಶದಾಧ್ಯಂತ ಹಬ್ಬಿದೆ.
ಕರ್ನಾಟಕದ ಪೊಲೀಸರು ಸೈಬರ್ ಕ್ರೈಂ ನಲ್ಲಿ ತೊಡಗಿರುವ ವಂಚಕರನ್ನು ಹೆಡಮುರಿಗೆ ಕಟ್ಟಿರುವ ಉಧಾಹರಣೆಗಳಿವೆ.
ಸೈಬರ್ ಕ್ರೈಮ್ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, ವಿದ್ಯಾವಂತರೇ ಅತೀ ಹೆಚ್ಚು ವಂಚನೆಗೆ ಒಳಗಾಗಿದ್ದಾರೆ.
ಧಾರವಾಡದಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ. ಸೈಬರ್ ಕ್ರೈಮ್ ಪೊಲೀಸರ ವೇಷದಲ್ಲಿ ಬಂದ ಇಬ್ಬರು, ಕೇಸ್ ಆಗತ್ತೆ ಎಂದು ಹೆದರಿಸಿ 5 ಲಕ್ಷ ಮೌಲ್ಯದ ಬಂಗಾರವನ್ನು ಕೊಳ್ಳೆ ಹೊಡೆದು ಹೋಗಿರುವ ಸಂಗತಿ ಬೆಳಕಿಗೆ ಬಂದಿದೆ.
ಅಳ್ನಾವರ ಹತ್ತಿರ ಇರುವ ಅರವಟಿಗಿ ಗ್ರಾಮದವರು ಎನ್ನಲಾದ ಕುಟುಂಬವನ್ನು ಹೆದರಿಸಿ ಬಂಗಾರವನ್ನು ದೋಚಲಾಗಿದೆ ಎನ್ನಲಾಗಿದೆ.
Author: Karnataka Files
Post Views: 7





