ಧಾರವಾಡ ಜಿಲ್ಲೆಯಲ್ಲಿ ಇರುವ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಬ್ರಷ್ಟಾಚಾರ ತಾಂಡವವಾಡುತ್ತಿದೆ.
“ಕಾಯಕವೇ ಕೈಲಾಸ” ದ ಬದಲಾಗಿ “ಕಾಸು ಕೊಟ್ಟರೆ ಮಾತ್ರ ಕೆಲಸ” ಅನ್ನೋ ಸ್ಥಿತಿಗೆ ಧಾರವಾಡ ಸಿಟಿ ಸರ್ವೇ ( ನಗರ ಭೂ ಮಾಪನ ) ಇಲಾಖೆ ಬಂದು ನಿಂತಿದೆ.
ಇಲ್ಲಿ ಆಯಾ ಕೆಲಸಕ್ಕೆ ಇಂತಿಷ್ಟು ಎಂದು ರೇಟ್ ಫಿಕ್ಸ್ ಮಾಡಲಾಗಿದೆ. ಜನರನ್ನು ನಿರಂತರವಾಗಿ ಸುಲಿಗೆ ಮಾಡಲಾಗುತ್ತಿದೆ.
ಹೆಸರು ಎಂಟ್ರಿಗೆ 5 ಸಾವಿರ ರೂಪಾಯಿ, ಸಬ್ ಡಿವಿಷನ್ ಮಾಡಿಕೊಡಲು 20 ಸಾವಿರ ರೂಪಾಯಿ ಹೀಗೆ ಒಂದೊಂದು ಕೆಲಸಕ್ಕೆ ಇಂತಿಷ್ಟು ದರ ಎಂದು ರೇಟ್ ಫಿಕ್ಸ್ ಮಾಡಲಾಗಿದೆ.
ಕೇಳಿದಷ್ಟು ಹಣ ಕೊಡದೆ ಇದ್ದರೆ, ಸತಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ನಗರ ಭೂ ಮಾಪಕ ಅಧಿಕಾರಿ ಮೇಲೆ ಆಪಾದನೆ ಕೇಳಿ ಬರುತ್ತಿದೆ.
DDLR ಶಿವಣ್ಣನವರ ಬಹಳ ಸಾಫ್ಟ್ ಅಧಿಕಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರಿಗೆ ಇವ್ಯಾವವು ಗಮನಕ್ಕೆ ಬಂದಿಲ್ಲ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.
ದೂರದ ಊರಿನಿಂದ ಕೆಲಸ ಮಾಡಿಸಿಕೊಳ್ಳಲು ಬಂದವರು, ಬೇರೆ ದಾರಿಯಿಲ್ಲದೇ ಕೇಳಿದಷ್ಟು ದುಡ್ಡು ಕೊಟ್ಟು ಹೋಗುತ್ತಿದ್ದಾರೆ.
ಹಾಗೇ ಹೋಗುವಾಗ ಜನರು, ಬಿಜೆಪಿ ಸರ್ಕಾರ ಹಾಗೂ ಕಾಂಗ್ರೇಸ್ ಸರ್ಕಾರದ ಆಡಳಿತವನ್ನು ಹೋಲಿಕೆ ಮಾಡುತ್ತಿದ್ದಾರೆ.
ಉಆಶಾ ಎಂಬುವವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು, ಜಿಲ್ಲಾಡಳಿತ ಎಚ್ಚರಗೊಳ್ಳಬೇಕಿದೆ.





