ನಾಳೆ ದಿನಾಂಕ 19 ರಂದು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ವಿಜಯದಶಮಿ ಪ್ರಯುಕ್ತ RSS ಪಥ ಸಂಚಲನ ನಡೆಯಲಿದೆ.
ಮಧ್ಯಾಹ್ನ 3 ಘಂಟೆಗೆ ಗರಗ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಿಂದ ಪಥ ಸಂಚಲನ ಆರಂಭವಾಗಲಿದ್ದು, ಸಂಜೆ ಜಯಕಿರ್ತಿ ಶಾಲಾ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ.
ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟದಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಯಾವದೇ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ನಿರ್ಣಯ ಕೈಗೊಂಡಿದೆ.
ಇದೆಲ್ಲದರ ಮಧ್ಯೆ ನಾಳೆ RSS, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಿಂದ ಪಥ ಸಂಚಲನ ಆರಂಭ ಮಾಡಲಿದ್ದು, ಸರ್ಕಾರದ ಅಧಿಕೃತ ಆದೇಶಕ್ಕಾಗಿ ತಾಲೂಕಾ ಆಡಳಿತ ಕಾಯುತ್ತಿದೆ.
ಕರ್ನಾಟಕ ಫೈಲ್ಸ್ ಜೊತೆ ಮಾತನಾಡಿದ ಧಾರವಾಡ ತಹಸೀಲ್ದಾರ್ ಹೂಗಾರ ಅವರು, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಿಂದ ಆರಂಭವಾಗುವ RSS ಪಥ ಸಂಚಲನದ ಬಗ್ಗೆ ಮಾಹಿತಿ ಇಲ್ಲಾ ಎಂದಿದ್ದಾರೆ.
Author: Karnataka Files
Post Views: 12





