Download Our App

Follow us

Home » ಕಾನೂನು » ಆತನಿಂದ ತೊಂದರೆ, ಪತ್ರಕರ್ತರಿಂದ ಕಂಪ್ಲೇಂಟ್

ಆತನಿಂದ ತೊಂದರೆ, ಪತ್ರಕರ್ತರಿಂದ ಕಂಪ್ಲೇಂಟ್

ಧಾರವಾಡ ಜಿಲ್ಲೆಯಲ್ಲಿ ಆಗು ಹೋಗುಗಳ ಬಗ್ಗೆ ವರದಿ ಮಾಡುವ ಸಂದರ್ಭದಲ್ಲಿ ಆತನಿಂದ ತೊಂದರೆಯಾಗುತ್ತಿದೆ ಎಂದು ಧಾರವಾಡದ ಕಾರ್ಯನಿರತ ಪತ್ರಕರ್ತರು ಆತನ ಬಗ್ಗೆ ಮೌಖಿಕ ದೂರು ಕೊಟ್ಟಿದ್ದಾರೆ.

ಮುದ್ರಣ ಹಾಗೂ ವಿದ್ಯುನ್ಮಾನ್ ಕ್ಷೇತ್ರದ ವರದಿಗಾರರು ಸೇರಿ, ಧಾರವಾಡ ವಾರ್ತಾ ಇಲಾಖೆಯ ಒಬ್ಬ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.

ಧಾರವಾಡದ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಮೇಲಾಧಿಕಾರಿಗಳು ಇಲ್ಲದೆ ಇರೋ ಕಾರಣಕ್ಕೆ  ಕಚೇರಿಯಲ್ಲಿ ಆತ ಆಡಿದ್ದೇ ಆಟ ಎನ್ನುವಂತಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ ಅನ್ನೋ ಅಸಾಮಾಧಾನ ಹೊರಹಾಕಿದ್ದಾರೆ.

ಪ್ರತಿಷ್ಟಿತ ಚಾನೆಲ್ ಒಂದರ ವರದಿಗಾರರು, ಜಿಲ್ಲಾ ಪಂಚಾಯತಿಯ ಹಿರಿಯ ಅಧಿಕಾರಿಗಳಿಗೆ ಪ್ರತಿಕ್ರಿಯೆ ಕೊಡಲು ಹೋದಾಗ ಆತನ ಹೆಸರು ಹೇಳಿ ವಾಪಸ ಕಳಿಸಿದ್ದಾರೆ ಎನ್ನಲಾಗಿದ್ದು, ಧಾರವಾಡದ ಮಾಧ್ಯಮ ಆತನ ಕೈಯಲ್ಲಿ ಇದೆ ಅನ್ನೋ ತರಹ ಆ ವ್ಯಕ್ತಿ ನಡೆದುಕೊಳ್ಳುತ್ತಿದ್ದಾನೆ ಎನ್ನಲಾಗಿದೆ.

ಧಾರವಾಡ ಮಾಧ್ಯಮಕ್ಕೆ ತನ್ನದೇ ಆದ ಘನತೆ ಇದ್ದು, ಇಲ್ಲಿನ ವಾರದಿಗಾರರು ಮುಲಾಜಿಲ್ಲದ ಸುದ್ದಿ ಪ್ರಕಟಿಸಿ ಹೆಸರು ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಹತ್ತಿರ ತಮ್ಮ ನೋವು ತೋಡಿಕೊಂಡಿರುವ ಧಾರವಾಡದ ಕಾರ್ಯನಿರತ ಪತ್ರಕರ್ತರ ಅಹವಾಲಿಗೆ ಜಿಲ್ಲಾಧಿಕಾರಿಗಳು ಕಿವಿಗೋಡದೆ ಹೋದಲ್ಲಿ ಅಸಹಕಾರ ಚಳುವಳಿಯಂತೆ ಸೆಟೆದು ನಿಲ್ಲುವಂತ ಸಮಯ ಬಂದರು ಅಚ್ಚರಿ ಪಡಬೇಕಿಲ್ಲ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಕೀರ ಸನದಿ ಮುಂದುವರಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶಾಕೀರ ಸನದಿಯವರನ್ನು ಮುಂದುವರೆಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಹುಡಾ ಜೊತೆ ಗದಗ, ಹಾವೇರಿ, ಬೆಳಗಾವಿ

Live Cricket

error: Content is protected !!