Download Our App

Follow us

Home » ಕಾನೂನು » ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿ ಅಪ್ಪ ಅಮ್ಮ ಸೇರಿದಂತೆ ಎಲ್ಲ ನಕಲಿ ಧಾಖಲೆಗಳು ಸೃಷ್ಟಿಯಾಗುತ್ತವೆ. ನಿಮ್ಮ ಪ್ರಾಪರ್ಟಿ ಬಗ್ಗೆ ಹುಷಾರು!

ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿ ಅಪ್ಪ ಅಮ್ಮ ಸೇರಿದಂತೆ ಎಲ್ಲ ನಕಲಿ ಧಾಖಲೆಗಳು ಸೃಷ್ಟಿಯಾಗುತ್ತವೆ. ನಿಮ್ಮ ಪ್ರಾಪರ್ಟಿ ಬಗ್ಗೆ ಹುಷಾರು!

ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿನ ಕರ್ಮಕಾಂಡ ಒಂದೊಂದಾಗಿ ಹೊರಬೀಳುತ್ತಿವೆ.

ಧಾರವಾಡ ತಹಸೀಲ್ದಾರ್ ಕಚೇರಿ ಆಡಳಿತ ಹದಗೆಟ್ಟು ಹೋಗಿದೆ. ಇಲ್ಲಿ ಬಂದು ಕೂತಿರುವ ಬಹುತೇಕ ಸಿಬ್ಬಂದಿ ಹಣ ಗಳಿಸಲು ನಕಲಿ ಅಪ್ಪ ಅಮ್ಮನನ್ನು ಸೃಷ್ಟಿ ಮಾಡಿ ಪೂರ್ವಜರು ಮಾಡಿದ ಆಸ್ತಿ ಲಪಟಾಯಿಸುತ್ತಿರುವ ಪ್ರಕರಣಗಳು ಒಂದೊಂದಾಗಿ ಹೊರ ಬೀಳುತ್ತೀವೆ.

ಬೇರೆ ರಾಜ್ಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ರಹವಾಸಿ ಪತ್ರದಿಂದ ಹಿಡಿದು, ಪಹಣಿ ಪತ್ರ ಬದಲಾವಣೆ ಮಾಡಿ ಆಸ್ತಿ ಲಪಟಾಯಿಸುವ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ.

ಒಂದೊಂದು ಹುದ್ದೆಗೆ 5 ಲಕ್ಷದವರೆಗೆ ಕಪ್ಪು ಕಾಣಿಕೆ ಕೊಟ್ಟು ಬಂದಿರುವ  ಧಾರವಾಡ ತಹಸೀಲ್ದಾರ್ ಕಚೇರಿಯ ಕೆಲ ಸಿಬ್ಬಂದಿ, ಕಂದಾಯ ಇಲಾಖೆಯ ಮಾನ ಹರಾಜು ಹಾಕುತ್ತಿದ್ದಾರೆ.

ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಧಾರವಾಡ ತಹಸೀಲ್ದಾರ್ ಆಗಿರುವ ಹೂಗಾರ ಅವರು ಯಾಕೆ ಸುಮ್ಮನೆ ಕುಳಿತಿದ್ದಾರೋ ಭಗವಂತನೆ ಬಲ್ಲ.

ಕರ್ನಾಟಕ ಫೈಲ್ಸ್ ಧಾಖಲೆಗಳೊಂದಿಗೆ ಕಂದಾಯ ಸಚಿವರ ಗಮನಕ್ಕೆ ತರಲಿದ್ದು, ಕಪ್ಪು ಚುಕ್ಕೆ ಇಲ್ಲದ ಜಿಲ್ಲಾಧಿಕಾರಿ ಎಂದು ಹೆಸರು ಮಾಡಿರುವ ದಿವ್ಯ ಪ್ರಭು ಅವರು ಧಾರವಾಡ ತಹಸೀಲ್ದಾರ್ ಕಚೇರಿಯ ಆಡಳಿತದ ಮೇಲೆ ಕಣ್ಣಿಡಬೇಕಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಕೀರ ಸನದಿ ಮುಂದುವರಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶಾಕೀರ ಸನದಿಯವರನ್ನು ಮುಂದುವರೆಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಹುಡಾ ಜೊತೆ ಗದಗ, ಹಾವೇರಿ, ಬೆಳಗಾವಿ

Live Cricket

error: Content is protected !!