ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಹೋರಾಟ ಕೈಗೆತ್ತಿಕೊಂಡಿರುವ AAKSS ಸಂಘಟನಯ ಮುಖಂಡ ಕಾಂತಕುಮಾರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚರ್ಚೆ ನಡೆಸಿದರು.

ಉದ್ಯೋಗ ಬಿಕ್ಕಟ್ಟಿನ ಬಗ್ಗೆ ಸರ್ಕಾರದೊಡನೆ ಪರಸ್ಪರ ಕುಳಿತು ಪರಿಹಾರ ಕಂಡು ಹಿಡಿಯಬೇಕೆಂಬ ನ್ಯಾಯಮೂರ್ತಿ ನಾಗಪ್ರಸನ್ನ್ ಅವರ ಸೂಚನೆಯಂತೆ ಚರ್ಚೆ ನಡೆದಿದೆ ಎಂದು ಕಾಂತಕುಮಾರ ಎಕ್ಸ್ ನಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಒಂದು ಘಂಟೆಗಳ ಕಾಲ ನಡೆದ ಚರ್ಚೆ ಆಶಾಭಾವನೆ ಮೂಡಿಸಿದೆ ಎಂದು ಕಾಂತಕುಮಾರ ತಿಳಿಸಿದ್ದಾರೆ.ಸರ್ಕಾರ ನೀಡಿದ ಭರವಸೆಯಂತೆ ಮತ್ತಷ್ಟು ದಿನ ಕಾಯುತ್ತೇವೆ ಎಂದು ಅವರು ಹೇಳಿದ್ದಾರೆ.

Author: Karnataka Files
Post Views: 395





