ನಾಯಕತ್ವ ಬದಲಾವಣೆ ವಿಚಾರ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸುತ್ತಿದಂತೆ, ಮಾಜಿ ಸಚಿವರಾದ ಕೆ.ಎನ್. ರಾಜಣ್ಣರನ್ನು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಭೇಟಿ ಮಾಡಿದ್ದಾರೆ.
ರಾಜಣ್ಣ, ಮಂತ್ರಿ ಸ್ಥಾನದಿಂದ ಇಳಿಸುತ್ತಿದ್ದಂತೆ ಅಬ್ಬರಿಸಿದ್ದ ಮಾತುಗಳು ದೊಡ್ಡ ಸುದ್ದಿ ಮಾಡಿದ್ದವು.
ಅಪರೋಕ್ಷವಾಗಿ ಡಿ ಕೆ ಶಿವಕುಮಾರರ ಮೇಲೆ ಮುನಿಸಿಕೊಂಡಿದ್ದ ರಾಜಣ್ಣರ ಸಿಟ್ಟು ತಣಿಸಲು ಪ್ರಯತ್ನಗಳು ನಡೆದಿದ್ದವು.
ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿಯ ಹೇಳಿಕೆ ಅಲ್ಲೋಲ ಕಲ್ಲೋಲ ಸ್ಥಿತಿಗೆ ತಂದಿತ್ತು. ಇದೀಗ ರಾಜಣ್ಣರನ್ನು ಡಿ ಕೆ ಶಿವಕುಮಾರ ಅವರು ಭೇಟಿ ಮಾಡಿದ್ದು, ಕುತೂಹಲ ಮೂಡಿಸಿದೆ.
Author: Karnataka Files
Post Views: 324





