Download Our App

Follow us

Home » ಕರ್ನಾಟಕ » ಹೊಸ ವರ್ಷಾಚರಣೆ : ಧಾರವಾಡ ಜಿಲ್ಲೆಯಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ನಿರೀಕ್ಷೆ

ಹೊಸ ವರ್ಷಾಚರಣೆ : ಧಾರವಾಡ ಜಿಲ್ಲೆಯಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ನಿರೀಕ್ಷೆ

ಧಾರವಾಡ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಬಾರ್ ಅಂಗಡಿಗಳು ಮಧುವನಗಿತ್ತಿಯಂತೆ ಶೃಂಗಾರಗೊಂಡಿವೆ. ಬಣ್ಣ ಬಣ್ಣದ ಲೈಟಿಂಗ್ ಗಳು ಬಾಟಲಿ ಕೊಳ್ಳುವಾಗಲೇ ನಶೆ ಏರಿಸುತ್ತವೆ. ಅಷ್ಟರ ಮಟ್ಟಿಗೆ ಬಾರ್ ಅಂಗಡಿಗಳು ಅಲಂಕೃತಗೊಂಡಿವೆ.

ತರಹೇವಾರಿ ಬ್ರಾಂಡ್ ಗಳನ್ನು ತರಿಸಲಾಗಿದೆ. ಬೆಳಿಗ್ಗೆ ಬಾರ್ ಅಂಗಡಿಗಳಲ್ಲಿ ಊದಿನಕಡ್ಡಿ ಹಚ್ಚಿ ದೀಪ ಬೆಳಗುವಷ್ಟರಲ್ಲಿ ಗಿರಾಕಿಗಳು ಬರಲು ಆರಂಭವಾಗುತ್ತವೆ. 

ಧಾರವಾಡ ಜಿಲ್ಲೆಯಲ್ಲಿ ಒಟ್ಟು 260 ಬಾರ್ ಅಂಗಡಿಗಳಿವೆ. ಬಾರ್ ಅಂಗಡಿಗಳ ಮಾಲೀಕರಿಗೆ ಡಿಸೆಂಬರ್ 31 ಬಂತು ಅಂದರೆ ಹಬ್ಬನೇ ಹಬ್ಬ.

ಅಂದು ಒಂದು ಕ್ವಾರ್ಟರ್ ಕುಡಿಯುವವರು ಎರಡು ಕ್ವಾರ್ಟರ್ ಕುಡಿದು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. 

ಕೆಲವರು ಕುಡಿದು, ಬಟ್ಟೆ ಹರಿದುಕೊಂಡು ಕುಣಿದಾಡಿದರೆ, ಇನ್ನು ಕೆಲವರು ಕುಡಿದು ಟೈಟ್ ಆದವರ ಸಹಾಯಕ್ಕೆ ಬಂದು ಅವರನ್ನು ಸುರಕ್ಷಿತವಾಗಿ ಮನೆಯವರೆಗೆ ಬಿಟ್ಟು ಮಾನವೀಯತೆ ಮೆರೆಯುತ್ತಾರೆ.

ಅಂದ ಹಾಗೇ ಈ ಸಲ ಧಾರವಾಡ ಜಿಲ್ಲೆಯಲ್ಲಿ 8 ಕೋಟಿ ಮೊತ್ತದ ಮಧ್ಯ ಮಾರಾಟವಾಗಬಹುದು ಎಂಬ ನಿರೀಕ್ಷೆ ಇದೆ ಎಂದು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!