Download Our App

Follow us

Home » ಕಾನೂನು » ಧಾರವಾಡ : ಚಕ್ರವರ್ತಿ ಸೂಲಿಬೆಲೆ‌ ಕಾರ್ಯಕ್ರಮಕ್ಕೆ ದಲಿತ ಸಂಘಟನೆ ವಿರೋದ / ಪೊಲೀಸ್ ವಶಕ್ಕೆ

ಧಾರವಾಡ : ಚಕ್ರವರ್ತಿ ಸೂಲಿಬೆಲೆ‌ ಕಾರ್ಯಕ್ರಮಕ್ಕೆ ದಲಿತ ಸಂಘಟನೆ ವಿರೋದ / ಪೊಲೀಸ್ ವಶಕ್ಕೆ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಮಧ್ಯಾಹ್ನ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮಕ್ಕೆ ದಲಿತ ಸಂಘಟನೆಗಳು ವಿರೋದ ವ್ಯಕ್ತಪಡಿಸಿದವು. 

ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮಕ್ಕೆ ಒಳ್ಳೆಯ ಚಿಂತಕರನ್ನು ಆಹ್ವಾಣನಿಸುವ ಬದಲು ಹಿಂದೂ ಫೈರ್ ಬ್ರಾಂಡ್ ಚಕ್ರವರ್ತಿ ಸೂಲಿಬೆಲೆಗೆ ಆಹ್ವಾನ ನೀಡಿದ್ದಕ್ಕೆ ಕೃಷಿ ವಿವಿ ಎದುರು ಪ್ರತಿಭಟನೆ ನಡೆಸಲಾಯಿತು. 

ಈ ಪ್ರತಿಭಟನೆಯಲ್ಲಿ ಕೃಷಿ ವಿವಿ ಬೋರ್ಡ್ ಸದಸ್ಯ ರವಿ ಮಾಳಗೇರ, ಯಾರ ಅನುಮತಿ ಪಡೆಯದೇ ಕುಲಪತಿ ಪಾಟೀಲ, ಸೂಲಿಬೆಲೆಯನ್ನು ಕರೆಸಿದ್ದು, ಇದು ಅವರಪ್ಪನ ಆಸ್ತಿಯಾ ಎಂದು ತರಾಟೆಗೆ ತೆಗೆದುಕೊಂಡರು.

ಕೃಷಿ ವಿವಿ ಕುಲಪತಿ ಪಿ‌ ಎಲ್ ಪಾಟೀಲ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಗೇಟ್ ಒಳಗೆ ನುಗ್ಗಲು ಪ್ರಯತ್ನಿಸಿದರು. 

ಚಕ್ರವರ್ತಿ ಸೂಲಿಬೆಲೆ ವಿಜ್ಞಾನಿನಾ, ಅವರಿಗೆ‌ ಯಾಕೆ ಕರೆದಿದ್ದು ಎಂದು ದಲಿತ ಮುಖಂಡ ಪರಮೇಶ್ವರ ಕಾಳೆ ಪ್ರಶ್ನೆ ಮಾಡಿದರು. ಕುಲಪತಿ ಪಾಟೀಲ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಪರಿಸ್ಥಿತಿ ಮಿರುತ್ತಿರುವದನ್ನು ಗಮನಿಸಿದ ಪೊಲೀಸರು, ಬಸವರಾಜ ಮಲಕಾರಿ ಸೇರಿದಂತೆ ಎಲ್ಲರನ್ನು ವಶಕ್ಕೆ ಪಡೆದರು.  

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!