ರಾಜ್ಯ ಕಾಂಗ್ರೇಸ್ಸಿನಲ್ಲಿ ಸಿ ಎಮ್ ಖುರ್ಚಿ ಬದಲಾವಣೆ ವಿಷಯ ಸುಂಟರಗಾಳಿಯಂತೆ ಹಾರಾಡುತ್ತಿರುವ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಎಕ್ಸ್ ಖಾತೆಯಲ್ಲಿ ಹಾಕಿದ ಪೋಸ್ಟ್ ಒಂದು ಸುನಾಮಿಯಂತೆ ಅಲೆ ಎಬ್ಬಿಸಿದೆ.
ಸಿ ಎಮ್ ಸೇರಿ 139 ಜನ ಶಾಸಕರು ನನ್ನ ಬಲ ಎಂದು ಪೋಸ್ಟ್ ಮಾಡಿದ ಡಿ ಕೆ ಶಿವಕುಮಾರ ಅವರು, ನಾನು ಹಾಗೂ ಸಿದ್ದರಾಮಯ್ಯನವರು ಜೊತೆಯಾಗಿ ಕೆಲಸ ಮಾಡುತ್ತಿದ್ದು, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
Author: Karnataka Files
Post Views: 122





