ಧಾರವಾಡದಲ್ಲಿ ಪ್ರಾಣಿ ರಕ್ಷಕ ಸೋಮಶೇಖರ ಎಂಬುವವರು ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇಟ್ಟುಕೊಂಡಿದ್ದ ಗರ್ಭಿಣಿ ಹಸುವಿನ ಪ್ರಾಣ ಉಳಿಸಿದ್ದಾರೆ.
ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಗರ್ಭಿಣಿ ಹಸುವಿನ ಹೊಟ್ಟೆಯಲ್ಲಿದ್ದ ಸುಮಾರು 50 ಕೆಜಿ ಪ್ಲಾಸ್ಟಿಕ್ ಹೊರತೆಗೆಯಲಾಗಿದೆ.

ಪ್ಲಾಸ್ಟಿಕ್ ತಿಂದು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಗರ್ಭಿಣಿ ಹಸುವನ್ನು ಅದರ ಮಾಲೀಕರು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದರು.
ಈ ಸುದ್ದಿ ಪ್ರಾಣಿ ರಕ್ಷಕ ಸೋಮಶೇಖರ್ ಚನ್ನಶೆಟ್ಟಿಗೆ ಬಂದಾಗ ಅವರು ತಕ್ಷಣ ಮಧ್ಯಪ್ರವೇಶಿಸಿ ಮಾಲೀಕರನ್ನು ಕಸಾಯಿಖಾನೆಗೆ ನೀಡದಂತೆ ಮನವೊಲಿಸಿ, ವೈದ್ಯರನ್ನು ಸಂಪರ್ಕಿಸಿ ಹಸುವಿಗೆ ಶಸ್ತ್ರ ಚಿಕೆತ್ಸೆ ಮಾಡಿಸಿದ್ದಾರೆ.
ಡಾ. ವಿನಿತ್ ಎಂಬುವವರು ಹಸುವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಹಸುವಿನ ಹೊಟ್ಟೆಯಲ್ಲಿದ್ದ 50 ಕೆಜಿಯಷ್ಟು ಪ್ಲಾಸ್ಟಿಕನ್ನು ಹೊರತೆಗೆದಿದ್ದಾರೆ. ಹಸು ಈಗ ಸುರಕ್ಷಿತವಾಗಿದ್ದು, ಚೇತರಿಸಿಕೊಳ್ಳುತ್ತಿದೆ.
Author: Karnataka Files
Post Views: 1,067





