ಧಾರವಾಡಕ್ಕೆ ಏನಾಗಿದೆಯೋ ಗೊತ್ತಿಲ್ಲ. ಕಳೆದ ಒಂದು ವಾರದಿಂದ ಒಂದಿಲ್ಲೊಂದು ಕಡೆಗೆ ಬೆಂಕಿ ಬಿದ್ದ ಸುದ್ದಿಗಳು ಕಿವಿಗೆ ಬೀಳುತ್ತಿವೆ.

ಕೋಳಿ ಕೆರೆಯಿಂದ ಆರಂಭಗೊಂಡು ಎಮ್ ಆರ್ ನಗರದಲ್ಲಿ ಅಗ್ನಿ ಅವಘಡ ನಡೆದ ಬಳಿಕ ಇದೀಗ ಎಮ್ಮಿಕೆರಿಯಲ್ಲಿ ಚಹಾ ಅಂಗಡಿಗೆ ಬೆಂಕಿ ಬಿದ್ದಿದೆ.

ಚಹಾ ಅಂಗಡಿಗೆ ಬೆಂಕಿ ಹತ್ತಿದ್ದನ್ನು ಗಮನಿಸಿದ ವಾಯುವಿಹಾರಿಗಳು ಅಗ್ನಿ ಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣಕ್ಕೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Author: Karnataka Files
Post Views: 487





