Download Our App

Follow us

Home » ರಾಜಕೀಯ » ಕುಸುಗಲ್ ದಿಂದ ನರೇಂದ್ರವರೆಗೆ ಹೊಸ ಬೈಪಾಸ್ ರಸ್ತೆ : ಗಡ್ಕರಿ ಭೇಟಿಯಾದ ಪ್ರಲ್ಲಾದ ಜೋಶಿ

ಕುಸುಗಲ್ ದಿಂದ ನರೇಂದ್ರವರೆಗೆ ಹೊಸ ಬೈಪಾಸ್ ರಸ್ತೆ : ಗಡ್ಕರಿ ಭೇಟಿಯಾದ ಪ್ರಲ್ಲಾದ ಜೋಶಿ

ನಿನ್ನೆ ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು, ಕುಸುಗಲ್ ರಸ್ತೆ ( ಹುಬ್ಬಳ್ಳಿ) ಯಿಂದ ನರೇಂದ್ರ ( ಧಾರವಾಡ) ಹೊಸ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡುವಂತೆ ವಿನಂತಿಸಿದರು.

ಬರುವ ವಾರ್ಷಿಕ ಯೋಜನೆ ಅಡಿ ಈ ಕಾಮಗಾರಿಯನ್ನು ಅನುಮೋದಿಸಲು ವಿನಂತಿಸಿದರು. ಇದೇ ಸಂದರ್ಭದಲ್ಲಿ ನವಲಗುಂದ ಬೈಪಾಸ ರಸ್ತೆಗೆ ಕೇಂದ್ರ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು ಇದನ್ನೂ NHAI – ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿದ್ದು ಆದಷ್ಟು ಬೇಗನೆ NHAI ದಿಂದ DPR – ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲು ಟೆಂಡರ್ ಕರಿಯುವಂತೆ ವಿನಂತಿಸಿದರು.

ರಾಜ್ಯಸರ್ಕಾರದಿಂದ ರಸ್ತೆ ನಿರ್ಮಾಣಕ್ಕೆ ಭೂಮಿ ದೊರೆತ ನಂತರ ತಕ್ಷಣವೇ ಕಾರ್ಯ ಆರಂಭವಾಗಲಿದೆ ಎಂದು ಗಡ್ಕರಿಯವರು ತಿಳಿಸಿದ್ದಾರೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!