ಕಾಗಿನೆಲೆ ಮಹಾಸಂಸ್ಥಾನ ತಿಂಥಣಿ ಬ್ರಿಡ್ಜ್ ನ ಕನಕಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ನಿಧನ ಹೊಂದಿದ್ದಾರೆ.
ಇಂದು ಬೆಳಗಿನ ಜಾವ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ, ಲಿಂಗಸಗೂರು ಆಸ್ಪತ್ರೆಗೆ ಧಾಖಲಿಸಲಾಗಿತ್ತು.
ಆದರೆ ಅಷ್ಟೊತ್ತಿಗೆ ಹೃದಯಾಘಾತದಿಂದ ಶ್ರೀಗಳು ನಿಧನ ಹೊಂದಿದರು ಎನ್ನಲಾಗಿದೆ. ಶ್ರೀಗಳ ಅಂತ್ಯಕ್ರಿಯೆ ಮಠದ ಆವರಣದಲ್ಲಿ ನಡೆಸಲಾಗುವದು ಎಂದು ಭಕ್ತರು ತಿಳಿಸಿದ್ದಾರೆ.

Author: Karnataka Files
Post Views: 249





