ಸೌದಿ ಅರೇಬಿಯಾ, ಇತಿಹಾಸದ ಜೊತೆಗೆ ಬೆಳೆದು ಬಂದವ್ಯಕ್ತಿಯ ನಿಧನದಿಂದ ದುಃಖಿಸುತ್ತಿದೆ.
ದೇಶದ ಅತ್ಯಂತ ಹಿರಿಯ ಪ್ರಜೆ ಎಂದು ನಂಬಲಾದ ನಾಸರ್ ಬಿನ್ ರದಾನ್ ಅಲ್ ರಶೀದ್ ಅಲ್ ವಡೈ ಅವರು 142 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
1800 ರ ದಶಕದ ಉತ್ತರಾರ್ಧದಲ್ಲಿ ಜನಿಸಿದ ಅವರು, ಸೌದಿ ಅರೇಬಿಯಾ ಅಸ್ತಿತ್ವದಲ್ಲಿರುವುದಕ್ಕಿಂತ ಬಹಳ ಹಿಂದೆಯೇ ಜನಿಸಿದವರಾಗಿದ್ದರು ಎನ್ನಲಾಗಿದೆ.
ಅಲ್ ವಡೈ ಅವರು ಸುಮಾರು 134 ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ, ಅವರು ತಮ್ಮ ಜೀವನದಲ್ಲಿ ಮೂರು ಬಾರಿ ವಿವಾಹವಾಗಿದ್ದರು.
ಅವರ ಮೂರನೇ ಹೆಂಡತಿ ಅವರೊಂದಿಗೆ 30 ವರ್ಷಗಳ ಕಾಲ ವಾಸಿಸಿದ್ದರು. ಆಕೆಯೂ ಸಹ 110 ವರ್ಷ ವಯಸ್ಸನಲ್ಲಿ ನಿಧನ ಹೊಂದಿದ್ದರು.
ಅವರ ಮಗಳು ಇನ್ನೂ ಜೀವಂತವಾಗಿದ್ದಾಳೆ. ಅವರ ಮೂವರು ಗಂಡು ಮಕ್ಕಳಲ್ಲಿ ಇಬ್ಬರು ಬದುಕುಳಿದಿದ್ದಾರೆ.
ರಾಷ್ಟ್ರದ ಸ್ಥಾಪಕರಿಂದ ಹಿಡಿದು ಈಗಿನ ರಾಜ ಸಲ್ಮಾನ್‌ವರೆಗೆ ಪ್ರತಿಯೊಬ್ಬ ಸೌದಿ ರಾಜನ ಆಳ್ವಿಕೆಯನ್ನು ಅವರು ನೋಡಿದ್ದಾರೆ.
ಮೃತರ ಅಂತ್ಯಕ್ರಿಯೆಯಲ್ಲಿ 7 ಸಾವಿರ ಜನ ಭಾಗವಹಿಸಿ, ಶೃದ್ದಾಂಜಲಿ ಸಲ್ಲಿಸಿದ್ದಾರೆ.





