ಧಾರವಾಡದಲ್ಲಿ ಮೊನ್ನೆ ನಡೆದಿದ್ದ ಜಾಕಿಯಾ ಮುಲ್ಲಾ ಎಂಬ ಯುವತಿಯ ಕೊಲೆ ಖಂಡಿಸಿ ಧಾರವಾಡದಲ್ಲಿಂದು ವಿವಿಧ ಸಂಘಟನೆಗಳು ಕ್ಯಾಂಡಲ್ ಮಾರ್ಚ್ ನಡೆಸಿದವು.
ಕಲಾಭವನದ ಮೈದಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಜಾಕಿಯಾ ಮುಲ್ಲಾ ಎಂಬ ಯುವತಿಯನ್ನು ಹತ್ಯೆ ಮಾಡಿರುವ ಸಾಬೀರ್ ಮುಲ್ಲಾನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಮಾನವೀಯತೆ ಸತ್ತು ಹೋಗಿದ್ದು, ಕಾನೂನು ಬಿಗಿಗೊಳಿಸುವ ಮೂಲಕ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಮಹಿಳೆಯರು ಆಗ್ರಹಿಸಿದರು.
ಕ್ಯಾಂಡಲ್ ಮಾರ್ಚ್ ನಲ್ಲಿ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಮುಸ್ತಾಕ್ ಹಾವೇರಿಪೇಟ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
Author: Karnataka Files
Post Views: 482





