Download Our App

Follow us

Home » ಕರ್ನಾಟಕ » ತಂದೆ ಶಂಕರ ಪಾಟೀಲ ಮುನೇನಕೊಪ್ಪರ ಹಾದಿಯಲ್ಲಿ ಮಗ ರೋಹಣ ಪಾಟೀಲ. ಅಸಹಾಯಕರ ಬೆನ್ನಿಗೆ ನಿಂತ ಎಸ್ ಪಿ ಫೌಂಡೇಶನ್

ತಂದೆ ಶಂಕರ ಪಾಟೀಲ ಮುನೇನಕೊಪ್ಪರ ಹಾದಿಯಲ್ಲಿ ಮಗ ರೋಹಣ ಪಾಟೀಲ. ಅಸಹಾಯಕರ ಬೆನ್ನಿಗೆ ನಿಂತ ಎಸ್ ಪಿ ಫೌಂಡೇಶನ್

ನವಲಗುಂದ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪರ ಮಗ ರೋಹಣ ಪಾಟೀಲ, ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಶ್ರೀಮಂತಿಕೆಯನ್ನು ಬದಿಗೆ ಸರಿಸಿ, ತೀರಾ ಸರಳವಾಗಿ, ಅಸಹಾಯಕರ,  ಬಡವರ ಮನೆಗೆ ಭೇಟಿ ನೀಡುವ ಮೂಲಕ ಅವರ ಸಮಸ್ಯೆಗೆ ಕಿವಿಯಾಗುತ್ತಿದ್ದಾರೆ.

ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟರೆ, ಹೇಗೆ ಮನೆತನದ ಹೆಸರು ಬೆಳಗಬಹುದು ಎಂಬುದಕ್ಕೆ ಶಂಕರ ಪಾಟೀಲ ಮುನೇನಕೊಪ್ಪರ ಮಗ ರೋಹಣ ಪಾಟೀಲ ಮುನೇನಕೊಪ್ಪ ಉಧಾಹರಣೆಯಾಗಿ ನಿಲ್ಲುತ್ತಾರೆ. 

ಎಸ್ ಪಿ ಫೌಂಡೇಶನ್ ಮೂಲಕ ಸದ್ದಿಲ್ಲದೇ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಹೊರಟಿರುವ ರೋಹಣ ಪಾಟೀಲ ಮುನೇನಕೊಪ್ಪ, ಬಡ ಮಕ್ಕಳ ಶಾಲಾ ಶುಲ್ಕ, ಬಡವರಿಗೆ ರೇಷನ್ ಹಂಚಿಕೆ, ಚಿಕಿತ್ಸಾ ವೆಚ್ಚ ಸೇರಿದಂತೆ ತಮ್ಮ ಸೇವೆಯನ್ನು ಬಡವರ ಮನೆ ಬಾಗಿಲಿಗೆ ವಿಸ್ತರಿಸಿದ್ದಾರೆ.

ಸಣ್ಣ ವಯಸ್ಸಿನಲ್ಲಿಯೆ ಉತ್ತಮ ಕಾರ್ಯ ಮಾಡುತ್ತಿರುವ ರೋಹಣ ಪಾಟೀಲ ಮುನೇನಕೊಪ್ಪ ಅವರ ಎಸ್ ಪಿ ಫೌಂಡೇಶನ್ ಸಮಾಜಕ್ಕೆ ಮಾದರಿಯಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಕೀರ ಸನದಿ ಮುಂದುವರಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶಾಕೀರ ಸನದಿಯವರನ್ನು ಮುಂದುವರೆಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಹುಡಾ ಜೊತೆ ಗದಗ, ಹಾವೇರಿ, ಬೆಳಗಾವಿ

Live Cricket

error: Content is protected !!