ದೆಹಲಿಯಲ್ಲಿ ಅಮಾನುಷ ಕೃತ್ಯವೊಂದು ನಡೆದಿದೆ. ಜನವರಿ 18, 2026 ರಂದು ಈಶಾನ್ಯ ದೆಹಲಿಯ ಭಜನ್ಪುರದಲ್ಲಿ 6 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವದು ತಡವಾಗಿ ಬೆಳಕಿಗೆ ಬಂದಿದೆ.
ಅಪರಾಧಿಗಳು ಬಾಲಕಿಯ ನೆರೆಹೊರೆಯವರಾಗಿದ್ದು, ಅವರು 10, 13 ಮತ್ತು 16 ವರ್ಷ ವಯಸ್ಸಿನ ಮೂವರು ಬಾಲಕರಾಗಿದ್ದಾರೆ.
ಆ ಮೂವರು ಆಕೆಗೆ ಆಹಾರದ ಆಮಿಷವೊಡ್ಡಿ, ಟೆರೇಸ್ಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಆಕೆಯ ಪೋಷಕರು ಆಕೆ ರಕ್ತಸಿಕ್ತಳಾಗಿ ನಡೆಯಲು ಸಾಧ್ಯವಾಗದೆ ಇರುವುದನ್ನು ಕಂಡುಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದು, ಆತನ ಶೋಧ ಕಾರ್ಯ ನಡೆದಿದೆ.
Author: Karnataka Files
Post Views: 222





