ಆಧುನಿಕ ಕೃಷಿ ಪದ್ಧತಿ, ಕೃಷಿ ಸಂಶೋಧನೆಯಲ್ಲಿ ದೇಶದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಧಾರವಾಡದ ಪ್ರತಿಷ್ಟಿತ ಕೃಷಿ ವಿ ವಿ ಇದೀಗ ರಾಜ್ಯವ್ಯಾಪಿ ಸುದ್ದಿ ಮಾಡಿದೆ.
ಧಾರವಾಡದ ಕೃಷಿ ವಿವಿ ಯಲ್ಲಿ ನಡೆದಿದೆ ಎನ್ನಲಾದ ಅವ್ಯಹಾರದ ಹಿನ್ನೆಲೆಯಲ್ಲಿ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನವರು ಲೆಕ್ಕ ಪರಿಶೋಧನೆ ಆರಂಭಿಸಿದ್ದಾರೆ.
ಬೆಂಗಳೂರು, ರಾಜಸ್ಥಾನ ಮತ್ತು ದೆಹಲಿಯಿಂದ ಬಂದಿರುವ CAG ತಂಡ 2018 ರಿಂದ 2015 ರ ವರೆಗೆ ನಡೆದಿರುವ ಲೆಕ್ಕ ಪತ್ರದ ಬಗ್ಗೆ ತನಿಖೆ ಆರಂಭಿಸಿದೆ.
ಹೈಕೋರ್ಟ್ ಆದೇಶದಂತೆ CAG ತನಿಖೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ 18 -12- 2025 ರಂದು ರಾಜ್ಯಪಾಲರ ಕಚೇರಿಯಿಂದಲೂ ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ಬರೆಯಲಾಗಿದೆ.

ಕೇಂದ್ರದ ಲೆಕ್ಕ ಪರಿಶೋಧನ ತಂಡದೊಂದಿಗೆ ರಾಜ್ಯದ ಲೆಕ್ಕ ಪರಿಶೋಧಕರು ತನಿಖೆ ನಡೆಸುತ್ತಿದ್ದು, ಕುಲಪತಿ ಪಿ ಎಲ್ ಪಾಟೀಲ ವಿರುದ್ಧ ಕೇಳಿ ಬಂದಿರುವ ಅವ್ಯವಹಾರ ಬಯಲಿಗೆ ಬರಲಿದೆ.
Author: Karnataka Files
Post Views: 403





