Download Our App

Follow us

Home » ಕ್ರೀಡೆ » ನವಲಗುಂದ : ನಾಳೆಯಿಂದ ರಾಜ್ಯ ಮಟ್ಟದ ಟಗರಿನ ಕಾಳಗ. ಮೊದಲ ಬಹುಮಾನ ಥಾರ್ ಜೀಪು. ರೈತ ಬಂಡಾಯದ ನಾಡಿನಲ್ಲಿ ಟಗರಿನ ಸಮರ

ನವಲಗುಂದ : ನಾಳೆಯಿಂದ ರಾಜ್ಯ ಮಟ್ಟದ ಟಗರಿನ ಕಾಳಗ. ಮೊದಲ ಬಹುಮಾನ ಥಾರ್ ಜೀಪು. ರೈತ ಬಂಡಾಯದ ನಾಡಿನಲ್ಲಿ ಟಗರಿನ ಸಮರ

ಸರ್ವಧರ್ಮ ವೇದಿಕೆ ಹಾಗೂ ವಿನೋದ ಅಸೂಟಿ ಗೆಳೆಯರ ಬಳಗದಿಂದ ನವಲಗುಂದದಲ್ಲಿ ನಾಳೆಯಿಂದ ರಾಜ್ಯ ಮಟ್ಟದ ಟಗರಿನ ಕಾಳಗ ಆರಂಭವಾಗಲಿದೆ.

ಮೊದಲ ಬಹುಮಾನ ಥಾರ್ ಜೀಪನ್ನು ಇಡುವದರ ಮೂಲಕ ಟಗರಿನ ಕಾಳಗ ರಾಜ್ಯದಲ್ಲಿ ಸುದ್ದಿ ಮಾಡಿದೆ.

ಫೆಬ್ರವರಿ 6 ರಂದು ನವಲಗುಂದದ ಅಣ್ಣಿಗೇರಿ ರಸ್ತೆಯಲ್ಲಿ ಬ್ರಹತ್ ಮೈದಾನ ಸಜ್ಜು ಮಾಡಲಾಗುತ್ತಿದ್ದು, ನಾಲ್ಕು ದಿನಗಳ ಕಾಲ ಈ ಕಾಳಗ ನಡೆಯಲಿದೆ.

ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಟಗರಿನ ಕಾಳಗ ವೀಕ್ಷಿಸಲು ಬರುವ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಈ ಟಗರಿನ ಕಾಳಗದಲ್ಲಿ ಭಾಗವಹಿಸಲು ರಾಜ್ಯದ ಮೂಲೆ ಮೂಲೆಯಿಂದ ಟಗರಿನ ಮಾಲೀಕರು ಹೆಸರನ್ನು ನೋಂದಣಿ ಮಾಡಿಸುತ್ತಿದ್ದಾರೆ.

ಸರ್ವ ಧರ್ಮ ವೇದಿಕೆ ಹಾಗೂ ವಿನೋದ ಅಸೂಟಿ ಬೆಂಬಲಿಗರು ಈ ಕಾಳಗವನ್ನು ಏರ್ಪಡಿಸಿದ್ದು, ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಎರಡು, ನಾಲ್ಕು, ಆರು ಹಾಗೂ ಎಂಟು ಹಲ್ಲುಗಳ ಟಗರಿನ ಕಾಳಗಕ್ಕೆ ಪ್ರತೈಕ ಬಹುಮಾನ ನಿಗದಿ ಮಾಡಲಾಗಿದೆ.

ಹೊರಜಿಲ್ಲೆಯಿಂದ ಬರುವ ಜನರಿಗೆ ಮಲಗಲು ವ್ಯವಸ್ಥೆ ಮಾಡಲಾಗಿದ್ದು, ಅವರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗಿದೆ.

ಟಗರಿನ ಕಾಳಗ ಶಾಂತ ರೀತಿಯಿಂದ ನಡೆಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೈತ ಬಂಡಾಯದ ನಾಡು ನವಲಗುಂದದಲ್ಲಿ ವಿನೋದ ಅಸೂಟಿ ಬೆಂಬಲಿಗರು ಹಮ್ಮಿಕೊಂಡಿರುವ ಟಗರಿನ ಕಾಳಗ ನಾಳೆ ಸಂಜೆ 4 ಘಂಟೆಗೆ ಉದ್ಘಾಟನೆಗೊಳ್ಳಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಕೀರ ಸನದಿ ಮುಂದುವರಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶಾಕೀರ ಸನದಿಯವರನ್ನು ಮುಂದುವರೆಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಹುಡಾ ಜೊತೆ ಗದಗ, ಹಾವೇರಿ, ಬೆಳಗಾವಿ

Live Cricket

error: Content is protected !!