Download Our App

Follow us

Home » ಕಾನೂನು » ಧಾರವಾಡ ವಾರ್ತಾ ಇಲಾಖೆಯಲ್ಲಿ ಒಂದು ವರ್ಷದಿಂದ ಖಾಲಿ ಇರುವ ಹಿರಿಯ ಅಧಿಕಾರಿ ಹುದ್ದೆ : ಬರುವವರನ್ನು ತಡೆಯುತ್ತಿರುವವರು ಯಾರು?

ಧಾರವಾಡ ವಾರ್ತಾ ಇಲಾಖೆಯಲ್ಲಿ ಒಂದು ವರ್ಷದಿಂದ ಖಾಲಿ ಇರುವ ಹಿರಿಯ ಅಧಿಕಾರಿ ಹುದ್ದೆ : ಬರುವವರನ್ನು ತಡೆಯುತ್ತಿರುವವರು ಯಾರು?

ಧಾರವಾಡ ವಾರ್ತಾ ಇಲಾಖೆ ಕಳೆದ ಒಂದು ವರ್ಷದಿಂದ ಹಿರಿಯ ಅಧಿಕಾರಿಗಳಿಲ್ಲದೆ ಅನಾಥವಾಗಿದೆ.

ಸರ್ಕಾರಿ ಸಭೆ ಸಮಾರಂಭ, ಸರ್ಕಾರಿ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಇಲ್ಲಿಂದಲೇ ನಡೆಯಬೇಕು.

ಆದರೆ ಕಳೆದ ಒಂದು ವರ್ಷದಿಂದ ಇಲ್ಲಿ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆ ಖಾಲಿಯಾಗಿದೆ. ಇಲ್ಲಿಗೆ ಬರುವವರನ್ನು ತಡೆಯಲಾಗುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ವಾರ್ತಾ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಬೇಸರದ ಮಾತುಗಳು ಮಾಧ್ಯಮ ಮಿತ್ರರಿಂದ ಕೇಳಿ ಬರುತ್ತಿವೆ.

ಮಾಧ್ಯಮ ಮಿತ್ರರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಅನ್ನೋ ಅಪಸ್ವರ ಒಂದು ಕಡೆಯಾದರೆ, ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಪ್ರತಿಕ್ರಿಯೆ ಸಹ ಸಿಗುತ್ತಿಲ್ಲವಂತೆ.

ಧಾರವಾಡ ಮತ್ತು ಹುಬ್ಬಳ್ಳಿ ಓರ್ವ ನೌಕರನ ಹಿಡಿತದಲ್ಲಿ ಇರುವ ಕಾರಣಕ್ಕೆ ಇದೆಲ್ಲ ನಡಿತಿದೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲ ತಿಂಗಳ ಹಿಂದೆ ಆ ನೌಕರನ ಬಗ್ಗೆ ಜಿಲ್ಲಾಧಿಕಾರಿಗಳ ಎದುರು ದೂರು ನೀಡಿ ಬಂದರು ವ್ಯವಸ್ಥೆ ಸರಿಯಾಗಿಲ್ಲ ಅನ್ನೋ ಆಕ್ರೋಶ ಮಾಧ್ಯಮ ಮಿತ್ರರಲ್ಲಿ ಮಾಡುಗಟ್ಟಿದೆ.

ಹುಬ್ಬಳ್ಳಿ ಮತ್ತು ಧಾರವಾಡದ ಪತ್ರಕರ್ತರಿಗೆ ರಾಜ್ಯದಲ್ಲಿ ತಮ್ಮದೇ ಆದ ಬದ್ಧತೆ, ಘನತೆ ಇದ್ದು, ಅವಳಿ ನಗರದ ಪತ್ರಕರ್ತರು ಮುಲಾಜಿಲ್ಲದ ಸುದ್ದಿ ಪ್ರಕಟಿಸಿ ರಾಜ್ಯದಲ್ಲಿ ಹೆಸರು ಮಾಡಿದ್ದಾರೆ.

ಆದರೆ ಓರ್ವ ನೌಕರರ, ಹಿರಿಯ ಅಧಿಕಾರಿಗಳನ್ನು ಬರದ ಹಾಗೇ ನೋಡಿಕೊಳ್ಳುತ್ತಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಿವಿಗೊಡಬೇಕಿದೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!