Download Our App

Follow us

Home » ಕಾನೂನು » ಧಾರವಾಡ : ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿರುವ ವಾರ್ತಾ ಇಲಾಖೆ ನೌಕರ / ಸೊಬರದಮಠ ಆಕ್ರೋಶ

ಧಾರವಾಡ : ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿರುವ ವಾರ್ತಾ ಇಲಾಖೆ ನೌಕರ / ಸೊಬರದಮಠ ಆಕ್ರೋಶ

ಧಾರವಾಡ ತಾಲೂಕಿನ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವಿರುದ್ಧ ಮಾತನಾಡಿದರು ಅನ್ನೋ ಕಾರಣಕ್ಕೆ ಅಧಿಕಾರಿಗಳ ದಾರಿ ತಪ್ಪಿಸುತ್ತಿರುವ ವಾರ್ತಾ ಇಲಾಖೆಯ ವಾರ್ತಾ ಸಹಾಯಕನ ಮೇಲೆ ಮಹದಾಯಿ ಹೋರಾಟಗಾರ ವಿರೇಶ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಕರ್ನಾಟಕ ಫೈಲ್ಸ್ ನೊಂದಿಗೆ ಮಾತನಾಡಿದ ಸೊಬರದಮಠ ಅವರು, ವಾರ್ತಾ ಇಲಾಖೆಯಲ್ಲಿ ವಾರ್ತಾ ಸಹಾಯಕ ಸುರೇಶ ಎಂಬುವವರು, ತಮ್ಮ ಕೆಲಸದ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ವಾರ್ತಾ ಇಲಾಖೆಯ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿರುವ ಅವರು, ಸುರೇಶ ಎಂಬುವವವರ ಆಟಾಟೋಪಕ್ಕೆ ಮೇಲಿನ ಅಧಿಕಾರಿಗಳು ಬ್ರೇಕ್ ಹಾಕದಿದ್ದಲ್ಲಿ ಹೋರಾಟದ ಹಾದಿ ಹಿಡಿಯುವದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. 

ಹೆಬ್ಬಳ್ಳಿ ಸರಹದ್ದಿನ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉತ್ತರಿಸಬೇಕಿತ್ತು. ಆದರೆ ಸುರೇಶ, ತಾವು ಪತ್ರಿಕಾಗೋಷ್ಟಿ ನಡೆಸಿದ ಬೆನ್ನಲ್ಲೇ ಸ್ವಯಂ ಸ್ಪಷ್ಟಿಕರಣ ನೀಡಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಹೋರಾಟದ ವಿಷಯದಲ್ಲಿ ಮಾಧ್ಯಮದವರನ್ನು ಸಹ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ. 

ಈ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಬೇಕೆನ್ನುವ ಕುತಂತ್ರದ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬದಲು, ಸುರೇಶ ಇಂಗಳಗಿ ಉರ್ಫ್ ಹಿರೇಮಠ ಅವರು ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಂತೆ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಆರೋಪಿಸಿದರು. 

ಸುರೇಶ ಅವರು ಸರ್ಕಾರಿ ಅಧಿಕಾರಿಗಳನ್ನು ಹಾಗೂ ಕ್ರಷರ್ ಮಾಲೀಕರನ್ನು  NGO ಹೆಸರಲ್ಲಿ ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ಬಯಲಿಗೆ ಎಳೆಯುವದಾಗಿ ಸೊಬರದಮಠ ಅವರು ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!