Download Our App

Follow us

Home » ಕಾನೂನು » ಧಾರವಾಡ ಕೃಷಿ ವಿವಿ : ಕುಲಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ / ಮಂಚ ಮತ್ತು ಲಂಚ ಕರ್ನಾಟಕ ಫೈಲ್ಸ್ ನಲ್ಲಿ ಮಾತ್ರ

ಧಾರವಾಡ ಕೃಷಿ ವಿವಿ : ಕುಲಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ / ಮಂಚ ಮತ್ತು ಲಂಚ ಕರ್ನಾಟಕ ಫೈಲ್ಸ್ ನಲ್ಲಿ ಮಾತ್ರ

ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಬಗೆದಂತೆಲ್ಲ ಆಕ್ರಮದ ವಾಸನೆ ಬರುತ್ತಿದೆ.

ಕೃಷಿ ವಿವಿ ಯ ಆಡಳಿತ ಸದಸ್ಯರು ಪತ್ರಿಕಾಗೋಷ್ಟಿ ನಡೆಸಿದ್ದೆ ತಡ ಒಂದೊಂದಾಗಿ ಹಗರಣಗಳು ಹೊರಬೀಳುತ್ತಿವೆ.

ಕೃಷಿ ವಿಶ್ವವಿದ್ಯಾಲಯವು, 5 ಮಹಾವಿದ್ಯಾಲಯಗಳು, 28 ಕೃಷಿ ಸಂಶೋಧನಾ ಕೇಂದ್ರಗಳು, 6 ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು ಹಾಗೂ 6 ಕೃಷಿ ವಿಜ್ಞಾನ ಕೇಂದ್ರಗಳ ವ್ಯಾಪ್ತಿ ಹೊಂದಿದೆ. 

ಹವಾಮಾನಕ್ಕೆ ಅನುಗುಣವಾಗಿ ವಿವಿಧ ಬೆಳೆಗಳಾದ ಜೋಳ, ಕಡಲೆ, ಶೇಂಗಾ, ಕಬ್ಬು, ಮೆಣಸಿನಕಾಯಿ, ತೃಣ ಧಾನ್ಯಗಳು, ವಾಣಿಜ್ಯ ಬೆಳೆಗಳು ಹೀಗೆ ಹತ್ತು ಹಲವಾರು ಬೆಳೆಗಳಲ್ಲಿ ಬೀಜೋತ್ಪಾದನೆ, ತಂತ್ರಜ್ಞಾನಗಳನ್ನು  ಕಂಡು ಹಿಡಿಯುವಲ್ಲಿ ವಿಶ್ವವಿದ್ಯಾಲಯವು ಸಾಧನೆ ಮಾಡಿದೆ

ಇಂತಹ ವಿಶ್ವ ವಿದ್ಯಾಲಯಕ್ಕೆ ಡಾ. ಪಿ.ಎಲ್.ಷಾಟೀಲ, ಕುಲಪತಿಯಾಗಿ, ಅಕ್ಟೋಬರ್ 2022 ರಿಂದ ಅಧಿಕಾರ ವಹಿಸಿಕೊಂಡಾಗಿನಿಂದ ಒಂದಲ್ಲ ಒಂದು ಅವಾಂತರಗಳನ್ನು ಮಾಡುತ್ತ ಬಂದಿದ್ದಾರೆ ಎಂದು ಭೀಮಪ್ಪ ಹಳಿಯಾಳ ಅವರು ಗಂಭೀರ ಆರೋಪ ಮಾಡಿದ್ದಾರೆ.

ಇದೀಗ ನಿವೃತ್ತ ನೌಕರರಾಗಿರುವ ಭೀಮಪ್ಪ ಹಳಿಯಾಳ ಎಂಬುವವರು, ಕೃಷಿ ವಿವಿ ಕುಲಪತಿ ಪಿ ಎಲ್ ಪಾಟೀಲ ಅವರ ಮೇಲೆ ಗಂಭೀರ ಆರೋಪ ಮಾಡಿ ಸಮರ ಸಾರಿದ್ದಾರೆ. ಕರ್ನಾಟಕ ಫೈಲ್ಸ್ ಗೆ ವಿಶೇಷ ಸಂದರ್ಶನ ನೀಡಿರುವ ಅವರು, ಈಗಿರುವ ಕುಲಪತಿ ಕೃಷಿ ವಿವಿ ಹೆಸರನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು, ಕೃಷಿ ವಿವಿ ಯ ಮರ್ಯಾದೆ ಉಳಿಯಬೇಕಾದರೆ, ಅವರ ಮೇಲೆ ತನಿಖೆ ನಡೆಸಿ, ಕುಲಪತಿ ಹುದ್ದೆಯಿಂದ ಕೆಳಗೆ ಇಳಿಸಬೇಕು ಎಂದು ಆಗ್ರಹಿಸಿದ್ದಾರೆ. 

ಕರ್ನಾಟಕ ಫೈಲ್ಸ್ ಜೊತೆ ಮಾತನಾಡಿರುವ ಅವರು, ಧಾರವಾಡ ಕೃಷಿ ವಿವಿ, ಮಂಚ ಮತ್ತು ಲಂಚಕ್ಕೆ ಮುನ್ನುಡಿ ಹಾಕಿರುವದು ಮನಸ್ಸಿಗೆ ನೋವು ತಂದಿದೆ ಎಂದಿದ್ದಾರೆ.

ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಪಿ ಎಲ್ ಪಾಟೀಲ, ಮಹಿಳಾ ನೌಕರರೊಬ್ಬರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎನ್ನಲಾಗಿದ್ದು, ಚಾಟಿಂಗ್ ಮತ್ತು ವಾಟ್ಸಪ್ಪ್ ಕಾಲ್  ಸದ್ಯದಲ್ಲೇ  ಹೊರಬೀಳಲಿದೆ ಎನ್ನಲಾಗಿದೆ. ಈ ವಿಷಯ ವಿವಿ ಯ ಆವರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!