Download Our App

Follow us

Home » ಭಾರತ » ಲಕ್ನೋ ವಿಶ್ವ ವಿದ್ಯಾಲಯ : ಮುಸ್ಲಿಮ್ ವಿದ್ಯಾರ್ಥಿಗಳ ನಮಾಜಗೆ ಹಿಂದೂ ವಿದ್ಯಾರ್ಥಿಗಳಿಂದ ಮಾನವ ಸರಪಳಿ ರಕ್ಷಣೆ

ಲಕ್ನೋ ವಿಶ್ವ ವಿದ್ಯಾಲಯ : ಮುಸ್ಲಿಮ್ ವಿದ್ಯಾರ್ಥಿಗಳ ನಮಾಜಗೆ ಹಿಂದೂ ವಿದ್ಯಾರ್ಥಿಗಳಿಂದ ಮಾನವ ಸರಪಳಿ ರಕ್ಷಣೆ

ಉತ್ತರ ಪ್ರದೇಶದ ಯೋಗಿ ಸರ್ಕಾರದ ಆಡಳಿತದಲ್ಲಿ ಹಿಂದೂ ವಿದ್ಯಾರ್ಥಿಗಳು ಮಾದರಿ ಕೆಲಸ ಮಾಡಿ ದೇಶದ ಗಮನ ಸೆಳೆದಿದ್ದಾರೆ. 

ಲಕ್ನೋ ವಿಶ್ವವಿದ್ಯಾನಿಲಯದ ವೀಡಿಯೊಗಳು ಇದೀಗ ವೈರಲ್ ಆಗಿವೆ. ಕ್ಯಾಂಪಸ್ ಒಳಗೆ ಬೀಗ ಹಾಕಲಾದ ಲಾಲ್ ಬರಾದರಿ ರಚನೆಯ ಮಸೀದಿ ಹೊರಗೆ ಕೆಲವು ಹಿಂದೂ ವಿದ್ಯಾರ್ಥಿಗಳು ಮುಸ್ಲಿಂ ಗೆಳೆಯರ ಸುತ್ತಲೂ ಮಾನವ ಸರಪಳಿಯನ್ನು ರಚಿಸಿ ನಮಾಜ್ ಮಾಡಲು ಅನುಕೂಲ ಕಲ್ಪಿಸಿದ್ದಾರೆ.

ವಿಶ್ವವಿದ್ಯಾನಿಲಯದ ಆಡಳಿತವು ಮಸೀದಿಯ ಗೇಟ್ ಅನ್ನು ಮುಚ್ಚಿ ಲಾಲ್ ಬರಾದರಿ ಕಟ್ಟಡದ ಶಿಥಿಲ ಮತ್ತು ಅಸುರಕ್ಷಿತ ಸ್ಥಿತಿಯ ಕಾರಣಕ್ಕೆ ಬೀಗ ಹಾಕಲಾಗಿತ್ತು.

ಮಸೀದಿ ಸುತ್ತಲು ಬ್ಯಾರಿಕೇಡ್ ಹಾಕಿದ ಕಾರಣಕ್ಕೆ ನಮಾಜ್ ಮಾಡಲು ಮುಸ್ಲಿಮ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು.

ಇದನ್ನು ಮನಗಂಡ ಹಿಂದೂ ವಿದ್ಯಾರ್ಥಿಗಳ ಗುಂಪು, ಮಸೀದಿ ಹೊರಾಂಗಣದಲ್ಲಿ ನಮಾಜ್ ಮಾಡಲು ಮಾನವ ಸರಪಳಿ ರಚಿಸಿ, ನಮಾಜ ಮಾಡಲು ರಕ್ಷಣೆ ನೀಡಿದ ಘಟನೆ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!