ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 8 ತಿಂಗಳಿನಿಂದ ಪರಪ್ಪನ ಅಗ್ರಹಾರದಲ್ಲಿರುವ ಶಾಸಕ ವಿನಯ ಕುಲಕರ್ಣಿಯವರು ಕೆಲವೇ ಕ್ಷಣಗಳಲ್ಲಿ ಬಿಡುಗಡೆಯಾಗಲಿದ್ದಾರೆ.
ನಿನ್ನೆ ಅವರಿಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಇಂದು ಜನಪ್ರತಿನಿದಿಗಳ ನ್ಯಾಯಾಲಯ ಷರತ್ತುಗೊಳಪಡಿಸಿ ಜಾಮೀನು ಪ್ರಕ್ರಿಯೆ ಮುಗಿಸಿದೆ.
ಧಾರವಾಡ ಪ್ರವೇಶಕ್ಕೆ ಕೋರ್ಟ್ ಅನುಮತಿ ಪಡೆಯುವದು ಕಡ್ಡಾಯವಾಗಿದ್ದು, ಅನುಮತಿ ಕೇಳಿದರೆ ಕೊಡುವದಾಗಿ ನ್ಯಾಯಾಲಯ ಹೇಳಿದೆ.
ಸರ್ಕಾರಿ ಕಾರ್ಯಕ್ರಮ, ಕುಟುಂಬ ಕಾರ್ಯಕ್ರಮ ಸೇರಿದಂತೆ ಸಭೆ ಸಮಾರಂಭಗಳಿಗೆ ಅನುಮತಿ ಪಡೆಯಬೇಕಾಗಿದೆ.
Author: Karnataka Files
Post Views: 2,387




