ಭಕ್ತರ ಹರಕೆ ಈಡೇರಿಸುವ ಪ್ರಖ್ಯಾತ ನವಲಗುಂದದ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಬರುವ ಭಕ್ತರಿಗೆ ವಿನೋದ ಅಸೂಟಿಯವರು ನೀರಿನ ವ್ಯವಸ್ಥೆ ಮಾಡಿದ್ದಾರೆ.
ನಿನ್ನೆಯಿಂದ ಲಕ್ಷಾಂತರ ಜನ ದರ್ಶನಕ್ಕೆ ಬರುತ್ತಿದ್ದು, ಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿದ್ದಾರೆ. ಅವರಿಗೆ ನೀರಿನ ಬಾಟಲಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಸರ್ವಧರ್ಮ ವೇದಿಕೆ ಹಾಗೂ ವಿನೋದ ಅಸೂಟಿ ಅಭಿಮಾನಿಗಳ ಬಳಗ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ನವಲಗುಂದ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ಚಾಲನೆ ನೀಡಿದರು.
ಅಧಿಕಾರ ಇಲ್ಲದಿದ್ದರು ಜನಸೇವೆಯಲ್ಲಿ ತೊಡಗಿರುವ ವಿನೋದ ಅಸೂಟಿ ಪ್ರತಿ ವರ್ಷ ಈ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ.
Author: Karnataka Files
Post Views: 200




