Download Our App

Follow us

Home » ಕಾನೂನು » ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮೊದಲನೇ ಹೆಂಡತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಕಿರಾತಕ ಗಂಡನನ್ನು ಬಂಧಿಸಿದ್ದಾರೆ. 

ಥಾರ್ ವಾಹನ ಹಾಯಿಸಿ ಮೊದಲ ಪತ್ನಿಯಾಗಿದ್ದ ಲಲಿತಾ ಹಾಕರಕಿ ಎಂಬಾಕೆಯನ್ನು ಗಂಡ ಉದಯ ಹಾಕರಕಿ, ಕೊಲೆಗೆ ಸುಪಾರಿ ಕೊಟ್ಟ ವಿಷಯ ಬಯಲಿಗೆ ಬಂದಿದೆ.

ಸುಪಾರಿ ಪಡೆದಿದ್ದ ಬೆಳಗಾವಿ ಹಾಗೂ ಧಾರವಾಡ ಮೂಲದ ಆರೋಪಿಗಳು ಲಲಿತಾಳ ಮೇಲೆ ಥಾರ ವಾಹನ ಹಾಯಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. 

ಪ್ರಕರಣ ಕೈಗೆತ್ತಿಕೊಂಡ ಧಾರವಾಡ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಕಮತಗಿ ಅಸಲಿ ವಿಷಯ ಹೊರಹಾಕಿ ಕೇಸಿಗೆ ಜೀವ ಕೊಟ್ಟಿದ್ದಾರೆ.

ಸಧ್ಯ ಧಾರವಾಡ ಪೊಲೀಸರು ಸೇರಿದಂತೆ 5 ಜನರನ್ನು ಬಂಧಿಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!