ರಾಜ್ಯದಲ್ಲಿ ಈ ವರ್ಷ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಘೋಷಣೆ ಮಾಡಿದೆ.
ಈಶಾನ್ಯ ಕ್ಷೇತ್ರದಿಂದ ಶಶಿಲ ನಮೋಶಿ, ಅಗ್ನಯ ಪದವೀಧರ ಕ್ಷೇತ್ರದಿಂದ ಕೆ ಎಮ್ ಸುರೇಶ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದಿಂದ ಹಾಲಿ ಶಾಸಕ ಎಸ್ ವಿ ಸಂಕನೂರ ಅವರಿಗೆ ಟಿಕೇಟ್ ನೀಡಲಾಗಿದೆ.
ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಧಾರವಾಡ ವ್ಯಾಪ್ತಿಯನ್ನು ಹೊಂದಿರುವ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಲ್ಲಿ 15 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು.
ಪ್ರಮುಖವಾಗಿ ಬಿಜೆಪಿಯ ಹಿರಿಯ ನಾಯಕ, ಲಿಂಗರಾಜ ಪಾಟೀಲ, ರಾಜಣ್ಣ ಕೊರವಿ, ಜಯತೀರ್ಥ ಕಟ್ಟಿ, ರವಿ ದಂಡಿನ, ಡಾ, ಶಿವನಗೌಡ ಸೇರಿದಂತೆ ಹಲವರು ಟಿಕೇಟ್ ಗಾಗಿ ಪ್ರಯತ್ನ ನಡೆಸಿದ್ದರು.
ಬಿಜೆಪಿಯಿಂದ ಟಿಕೇಟ್ ನೀಡಲಾಗುತ್ತದೆ ಅನ್ನೋ ಕಾರಣಕ್ಕೆ ಆಕಾಂಕ್ಷಿಗಳು ಪೈಪೋಟಿಗೆ ಬಿದ್ದವರಂತೆ ಮತದಾರರ ನೋಂದಣಿ ಮಾಡಿಸಿದ್ದರು.
ಈ ಬಾರಿ ಬಿಜೆಪಿ ಇಂದ ಎಸ್ ವಿ ಸಂಕನೂರ ಬದಲು ಬೇರೆಯವರಿಗೆ ಟಿಕೇಟ್ ನೀಡಲಾಗುತ್ತದೆ ಎಂಬ ಚರ್ಚೆ ನಡೆದಿತ್ತು. ಇದೆಲ್ಲದಕ್ಕು ಇದೀಗ ಬಿಜೆಪಿ ವಿರಾಮ ಎಳೆದಿದ್ದು, ಮತ್ತೆ ಸಂಕನೂರ ಅವರಿಗೆ ಬಿಜೆಪಿ ಟಿಕೇಟ್ ಘೋಷಣೆ ಮಾಡಿದೆ.
ಬಿಜೆಪಿಯಲ್ಲಿ ಭಿನ್ನಮತ ಎದುರಾಗುವ ಲಕ್ಷಣಗಳು ಕಂಡು ಬರುತ್ತಿದ್ದು, ಪಕ್ಷದ ಹಿತಕ್ಕಾಗಿ, ಪಕ್ಷ ಘೋಷಿಸಿದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ನಾಯಕರು ಅಸಮಾಧಾನಗೊಂಡಿರುವ ನಾಯಕರನ್ನು ಸಮಾಧಾನ ಪಡಿಸುವ ಕಾರ್ಯಕ್ಕೆ ಇಳಿಯುವ ಸಾಧ್ಯತೆಗಳಿವೆ




