Download Our App

Follow us

Home » ಕರ್ನಾಟಕ » ಧಾರವಾಡ ಜಿಲ್ಲಾಧಿಕಾರಿ ಯಾರು ?

ಧಾರವಾಡ ಜಿಲ್ಲಾಧಿಕಾರಿ ಯಾರು ?

ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ದಿವ್ಯ ಪ್ರಭು ವರ್ಗಾವಣೆಗೊಂಡು ಒಂದು ತಿಂಗಳಾಗುತ್ತಾ ಬಂದರು, ಧಾರವಾಡ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (DIPR ) ಯ ಫೇಸ್ ಬುಕ್ ನಲ್ಲಿ ಮಾತ್ರ ಹಳೆಯ ಜಿಲ್ಲಾಧಿಕಾರಿ ಕುಳಿತಿರುವ ಭಾವಚಿತ್ರ ಇರುವದು ಸೋಜಿಗ ಮೂಡಿಸಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ facebook ಹಾಗೂ X ಸಾಮಾಜಿಕ ಜಾಲತಾಣಗಳನ್ನು ವಾರ್ತಾ ಇಲಾಖೆ ನೋಡಿಕೊಳ್ಳುತ್ತದೆ.

ಧಾರವಾಡ ಜಿಲ್ಲೆಗೆ ಫೆಬ್ರವರಿ 11 ರಂದು ಜಿಲ್ಲಾಧಿಕಾರಿಯಾಗಿ ಬಂದಿರುವ ಶ್ರೀಮತಿ, ಸ್ನೇಹಲ್  ಅವರು ಕರ್ತವ್ಯದಲ್ಲಿ ತೊಡಗಿದ್ದಾರೆ. ಪ್ರತಿನಿತ್ಯ ಸಾರ್ವಜನಿಕರ ಅಹವಾಲು ಆಲಿಸುತ್ತಾ, ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ.

ವಾರ್ತಾ ಸಹಾಯಕ ಸುರೇಶ ಅವರು , ನೂತನ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಅವರು ಬಂದ ನಂತರ ಹಳೆಯ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಪೋಟೋ ತೆಗೆಯುವ ಮನಸ್ಸು ಮಾಡದಿರುವದು ” ಮರೆತೆನೆಂದರ ಮರೆಯಲಿ ಹ್ಯಾಂಗ ”  ಎಂಬ ಗೀತೆ ನೆನಪಿಗೆ ಬರುತ್ತದೆ.

ನಿರ್ಗಮಿತ ಜಿಲ್ಲಾಧಿಕಾರಿಗಳ ಜೊತೆ ಇದ್ದ ಸುರೇಶ ಅವರ ಹತ್ತಿರದ ಒಡನಾಟ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಹೆದರುವಂತ ಪರಿಸ್ಥಿತಿ ನಿರ್ಮಾಣ ಮಾಡಿತ್ತು ಎನ್ನಲಾಗಿದೆ. ಹಿಂದಿನ ಜಿಲ್ಲಾಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಕಂದಾಯ ಇಲಾಖೆಯ ಸಿಬ್ಬಂದಿ ADC ಹಾಗೂ AC ಅವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. 

ಹೀಗಾಗಿ ದಿವ್ಯ ಪ್ರಭು ಅವರ ಜಾಗಕ್ಕೆ ಸ್ನೇಹಲ್ ಅವರು ಬಂದರು ಸಹ ಇನ್ನುವರೆಗೆ DIPR ಧಾರವಾಡ  ಎಂಬ ಹೆಸರಿನಲ್ಲಿರುವ facebook ಖಾತೆಯಲ್ಲಿ ಈಗಲೂ ಸಹ ಹಳೆಯ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಫೋಟೋ ಇದ್ದು, ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಯಾರು ಅನ್ನೋ ಗೊಂದಲ ಮೂಡಿಸಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : APMC ಯಲ್ಲಿ ಎಲ್ಲಾ ತರಕಾರಿ ಸಸ್ತಾ : ಯಾವುದರ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ

ತಾಜಾ ತರಕಾರಿಗೆ ಹೆಸರಾದ ಧಾರವಾಡದ ಎಪಿಎಂಸಿ ಯಲ್ಲಿಂದು ಬಹುತೇಕ ತರಕಾರಿಗಳ ಬೆಲೆ ಕುಸಿತ ಕಂಡಿತ್ತು. ಮೆಂತೆ ಪಲ್ಲೆ ಯನ್ನು ಮಾರುಕಟ್ಟೆಗೆ ತಂದಿದ್ದ  ರೈತರು ಬೆಲೆ ಸಿಗದೇ ಇರೋ

Live Cricket

error: Content is protected !!