ಯರಗಟ್ಟಿ ಕೆರೆ ಇದೀಗ ಹಾಳು ಕೊಂಪೆಯಾಗಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ.
ಯರಗಟ್ಟಿ ಪಟ್ಟಣದಲ್ಲಿರುವ ಈ ಕೆರೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಒಂದು ಕಾಲಕ್ಕೆ ಇಡೀ ಊರಿಗೆ ಕುಡಿಯುವ ನೀರು ಸಿಗುತ್ತಿದ್ದ ಕೆರೆ, ಇದೀಗ ನಿರ್ಲಕ್ಷಕ್ಕೆ ಒಳಗಾಗಿದೆ.
ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ₹2.01 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಲಾಗಿದ್ದು, ಕಾಮಗಾರಿ ಮಾತ್ರ ಇನ್ನು ಆರಂಭವಾಗಿಲ್ಲ.
ಕೆರೆಯ ಅಭಿವೃದ್ಧಿ ಮತ್ತು ಪುನರುಜ್ಜೀವನ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿ ಅನ್ನೋದು ಯರಗಟ್ಟಿ ಗ್ರಾಮಸ್ಥರ ಭಾವನೆಯಾಗಿದೆ.
ಶಾಸಕರು ಹಾಗೂ ಅಧಿಕಾರಿ ವರ್ಗ, ಕಾಮಗಾರಿ ಪ್ರಾರಂಭಿಸಿ, ಮತ್ತೆ ಕೆರೆ ಉಪಯೋಗಕ್ಕೆ ಬರುವ ಹಾಗೆ ಮಾಡಬೇಕಿದೆ.
Author: Karnataka Files
Post Views: 172





