ಹುಬ್ಬಳ್ಳಿಯ ಹಿರಿಯ ಛಾಯಾಗ್ರಾಹಕ ವಾಮನ್ ಬಾಂಡಗೆ ನಿಧನ ಹೊಂದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ಅವರು ಇಂದು ನಿಧನರಾಗಿದ್ದಾರೆ.
ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಛಾಯಾಗ್ರಾಹಕರಾಗಿದ್ದ ಅವರು ಅಪಾರ ಸ್ನೇಹಿತರನ್ನು ಹೊಂದಿದ್ದರು.
ವಾಮನ್ ಅವರ ಅಂತ್ಯಕ್ರಿಯೆ ಇಂದು ಹುಬ್ಬಳ್ಳಿಯ ಹೆಗ್ಗೆರಿ ಸ್ಮಶಾನದಲ್ಲಿ ಸಂಜೆ 4 ಘಂಟೆಗೆ ನಡೆಯಲಿದೆ.
ವಾಮನ್ ಬಾಂಡಗೆ ಅವರ ನಿಧನಕ್ಕೆ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಧಾರವಾಡದ ಜರ್ನಲಿಸ್ಟ್ ಗಿಲ್ಡ್, ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಕಂಬನಿ ಮಿಡಿದಿವೆ.
Author: Karnataka Files
Post Views: 629





