ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿ, ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಪ್ರೊಫೆಸರ್ ಆಗಿದ್ದ ಉಷಾ ಮೂರ್ತಿಯವರು ಇಂದು ನಿಧನರಾಗಿದ್ದಾರೆ.
1994 ರ ಅವಧಿಯಲ್ಲಿ ಅವರು ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿದ್ದರು.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ತಮ್ಮ ಕೊನೆಯುಸಿರು ಇರುವವರೆಗೂ ಉಷಾ ಮೂರ್ತಿಯವರು, ಯೂನಿವರ್ಶಿಟಿ ಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಾಜಕೀಯ ಶಾಸ್ತ್ರ ಭೋಧನೆ ಮಾಡುತ್ತಿದ್ದರು.

ಧಾರವಾಡದ ಸಪ್ತಾಪುರ 1 ನೇ ಕ್ರಾಸನಲ್ಲಿರುವ ಅವರ ಮನೆಯಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ರಾತ್ರಿ 8 ಘಂಟೆಯವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರ ಶಿಷ್ಯವರ್ಗ ತಿಳಿಸಿದೆ.
Author: Karnataka Files
Post Views: 549




