ರೈತ ಬಂಡಾಯದ ನಾಡು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತೆ ಚಿಗುರಿಕೊಂಡಿದೆ.
ನವಲಗುಂದ ಕ್ಷೇತ್ರದಲ್ಲಿ ಎನ್ ಎಚ್ ಕೋನರೆಡ್ಡಿಯವರು ಪಕ್ಷ ಬಿಟ್ಟ ಮೇಲೆ ಜೆಡಿಎಸ್ ಕಥೆ ಮುಗಿತು ಎಂದು ಆಡಿಕೊಳ್ಳುತ್ತಿದ್ದವರ ಮುಂದೆ ಜೆಡಿಎಸ್ ಇದೀಗ ಮತ್ತೆ ಎದ್ದು ನಿಂತಿದೆ.
ನವಲಗುಂದ ಕ್ಷೇತ್ರದಲ್ಲಿ ಜೆಡಿಎಸ್ ನ ಗಟ್ಟಿ ಕಾರ್ಯಕರ್ತರು ಇದ್ದಾರೆ ಅನ್ನೋದನ್ನ ನಿನ್ನೆ ಅಣ್ಣಿಗೇರಿಯಲ್ಲಿ ನಡೆದ ಕಾರ್ಯಕ್ರಮ ರುಜುವಾತು ಪಡಿಸಿತು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ನವಲಗುಂದ ಕ್ಷೇತ್ರಕ್ಕೆ ಕೊಟ್ಟ ಕಾರ್ಯಕ್ರಮ, ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮ ಇನ್ನು ಜನಮಾನಸದಲ್ಲಿ ಹಾಗೇ ಉಳಿದಿವೆ.
ಈರುಳ್ಳಿ ಬೆಲೆ ಕುಸಿದಾಗ ತೊಂದರಿಯಲ್ಲಿದ್ದ ರೈತರ ಕಷ್ಟ ನೋಡಿ ಮರುಗಿದ್ದ ಕುಮಾರಸ್ವಾಮಿಯವರು ಅಣ್ಣಿಗೇರಿಗೆ ಬಂದಂತ ಸಂದರ್ಭದಲ್ಲಿ ಅಣ್ಣಿಗೇರಿಯಲ್ಲಿಯೇ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದರು.
ಅದೇ ಅಣ್ಣಿಗೇರಿಯಲ್ಲಿ ನಡೆದ ಪಕ್ಷದ ಪಧಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಸೇರಿದಂತೆ ಪಕ್ಷದ ಅನೇಕ ನಾಯಕರು ಭಾಗವಹಿಸಿದ್ದರು. ಬೂತ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಲು ಪಣತೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಬಿ ಗಂಗಾಧರಮಠ, ಹಿರಿಯ ವಕೀಲರಾದ ಸಿ ಎಸ್ ಪಾಟೀಲ, ಮೌಲಾಸಾಬ ವೈದ್ಯ. ಶಿವಶಂಕರ ಕಲ್ಲೂರ, ಮಾರುತಿ ಹಿಂಡಸಗೇರಿ, ಪ್ರಕಾಶ ಅಂಗಡಿ, ವಿರೇಶ ಶಾನಭೋಗರ, ಅಬ್ಬಾಸ ದೇವರಿಡು, ಜಿ ಎನ್ ತೋಟದ, ಗಂಗಾಧರ ಪತ್ತಾರ, ರೇಖಾ ನಾಯ್ಕರ, ದಸ್ತಗೀರ ಸಂಗಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




