Download Our App

Follow us

Home » ರಾಜಕೀಯ » ದಾವಣಗೆರೆ ದಕ್ಷಿಣ ಉಪಚುನಾವಣೆ : ಕಾಂಗ್ರೇಸ್ಸಿನ ಕುಟುಂಬ ರಾಜಕಾರಣಕ್ಕೆ ನಾಜೀಯಾ ಕೌಸರ್ ಸೆಡ್ಡು!

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಾಂಗ್ರೇಸ್ಸಿನ ಕುಟುಂಬ ರಾಜಕಾರಣಕ್ಕೆ ನಾಜೀಯಾ ಕೌಸರ್ ಸೆಡ್ಡು!

ದಾವಣಗೆರೆ ದಕ್ಷಿಣ ಕ್ಷೇತ್ರದ ಮಗಳು, ಅನುಭವಿ ಮತ್ತು ದಿಟ್ಟ ಪತ್ರಕರ್ತೆ ನಾಜೀಯಾ ಕೌಸರ್ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಧುಮಕಲು ಸಜ್ಜಾಗಿದ್ದಾರೆ.

ಶೇಕಡಾ 80 ರಷ್ಟು ಮುಸ್ಲಿಮ್ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ.

ಅವರ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಈಗ ಚುನಾವಣೆ ಘೋಷಣೆಯಾಗಿದೆ.

ಈ ಬಾರಿ ಕಾಂಗ್ರೇಸ್,  ಅಲ್ಪಸಂಖ್ಯಾತ ಮುಸ್ಲಿಮ್ ಸಮಾಜದವರಿಗೆ ಟಿಕೇಟ್ ನೀಡಬೇಕು ಎಂಬ ಒತ್ತಡಗಳು ಕೇಳಿ ಬರುತ್ತಿವೆ.

ಹಾಲಿ ವಿಧಾನ ಪರಿಷತ ಸದಸ್ಯ ಅಬ್ದುಲ್ ಜಬ್ಬಾರ, ಸಾಧಿಕ ಪೈಲ್ವಾನ್, ಖಾಲಿದ್ ಅವರಂತಹ ನಾಯಕರು ಟಿಕೇಟ್ ಗಾಗಿ ಹಕ್ಕು ಮಂಡಿಸಿದ್ದಾರೆ.

ಶಾಮನೂರು ಕುಟುಂಬದ ಬದಲಿಗೆ ಅಲ್ಪಸಂಖ್ಯಾತರಿಗೆ ಕಾಂಗ್ರೇಸ್ ಟಿಕೇಟ್ ನೀಡಬೇಕು ಎಂಬುದು ಮುಸ್ಲಿಮ್ ಸಮುದಾಯದ ಒಕ್ಕೂರಲಿನ ಧ್ವನಿಯಾಗಿದೆ. 

ಟಿಕೇಟ್ ಸಂಬಂಧವಾಗಿ, ಸಚಿವ ಮತ್ತು ಮುಸ್ಲಿಮ್ ಸಮಾಜದ ಸರ್ವೋಚ್ಚ ನಾಯಕ ಬಿ ಝೆಡ್ ಜಮೀರ ಅಹ್ಮದ ಖಾನ್ ಅವರ ಬಗ್ಗೆ ಎಸ್ ಎಸ್ ಮಲ್ಲಿಕಾರ್ಜುನ ಹಗುರವಾಗಿ ಮಾತನಾಡಿದ್ದರ ಬಗ್ಗೆ ಸಮಾಜದಲ್ಲಿ ಆಕ್ರೋಶ ಮಡುಗಿದೆ.

ಒಂದು ವೇಳೆ ಕಾಂಗ್ರೇಸ್ ಅಲ್ಪಸಂಖ್ಯಾತ ಮುಸ್ಲಿಮರಿಗೆ ಟಿಕೇಟ್ ನೀಡದೆ ಇದ್ದಲ್ಲಿ, ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ ನಾಜೀಯಾ ಕೌಸರ್ ಕಣಕ್ಕೆ ಇಳಿಯುವದು ಖಾತ್ರಿಯಾಗಿದೆ.

ಅವರು ಮುಸ್ಲಿಮ್ ಸಮುದಾಯದ ಪ್ರೇರಕ ಶಕ್ತಿಯಾಗಿ ನಾಜೀಯಾ ಕೌಸರ್ ಹೊರಹೊಮ್ಮಲಿದ್ದಾರೆ. 

ನಾಜೀಯಾ ಕೌಸರ್ ಯಾರು 

ನಾಜೀಯಾ ಕೌಸರ್, ದಾವಣಗೆರೆ ದಕ್ಷಿಣ ಕ್ಷೇತ್ರದ ಮನೆ ಮಗಳು, ಪತ್ರಕರ್ತೆಯಾಗಿ, ಸುದ್ದಿ ನಿರೂಪಕಿಯಾಗಿ, ಸುದ್ದಿ ಸಂಸ್ಥೆಯೊಂದರ ಮುಖ್ಯಸ್ಥೆಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಅಲ್ಲದೇ ಮಹಿಳೆಯರ ಮೇಲೆ ನಡೆಯುವ ಅನ್ಯಾಯ, ಆಕ್ರಮಗಳನ್ನು ಧೈರ್ಯವಾಗಿ ನಿಂತು ವಿರೋಧಿಸುತ್ತ ಬಂದಿದ್ದಾರೆ. 

ನಾಜೀಯಾ ಕೌಸರ್, ವಕ್ಸ್ ಬೋರ್ಡ್ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಸಾರ್ವಜನಿಕ ಸಂಪರ್ಕದ ಪಾತ್ರ’ ಎಂಬ 

ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅಲ್ಲದೇ ಹಜರತ್ ಟಿಪ್ಪು ಸುಲ್ತಾನರ ಕೊಡುಗೆ, ಅವರ ಜನಪರ ಆಡಳಿತದ ಬಗ್ಗೆ ಅತ್ಯಂತ ಐತಿಹಾಸಿಕ ಮಾಹಿತಿ ಹೊರತಂದಿದ್ದಾರೆ.

ರಾಜಕೀಯ ತುಳಿತಕ್ಕೆ ಒಳಗಾದ, ಅಧಿಕಾರದಿಂದ ವಂಚಿತರಾದ ಮುಸ್ಲಿಮ್ ಸಮಾಜಕ್ಕೆ ರಾಜಕೀಯ ಪ್ರಾತಿನಿದ್ಯ ಸಿಗದೇ ಇದ್ದಲ್ಲಿ ಅನಿವಾರ್ಯವಾಗಿ ನಾಜೀಯಾ ಕೌಸರ್ ರನ್ನು, ಕಣಕ್ಕೆ ಇಳಿಸುವ ಬಗ್ಗೆ ಸಮಾಜ ನಿರ್ಧರಿಸಿಯಾಗಿದೆ. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದದ ಪಂಚಗೃಹ ಹಿರೇಮಠದಲ್ಲಿ ಇಂದು ಇಫ್ತಾರ್ ಕೂಟ. ಭಾವೈಕ್ಯತೆಯ ಬೆಸುಗೆ ಬೆಸೆದ ಶ್ರೀಗಳು

ನವಲಗುಂದದ ಪಂಚಗ್ರಹ ಹಿರೇಮಠದಲ್ಲಿ ಇಂದು ಪವಿತ್ರ ರಮಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮ್ ಭಾಂದವರಿಗೆ ಇಫ್ತಾರ್ ಕೂಟ ಏರ್ಪಡಿಸಲಾಗಿದೆ. ಜಾತಿ ಜಾತಿಗಳ ಮಧ್ಯೆ ಸಂಘರ್ಷಗಳು, ಅಸೂಯೆ, ದ್ವೇಷ ಹರಡುತ್ತಿರುವ

Live Cricket

error: Content is protected !!