Download Our App

Follow us

Home » ಕರ್ನಾಟಕ » ನವಲಗುಂದದ ಪಂಚಗೃಹ ಹಿರೇಮಠದಲ್ಲಿ ಇಂದು ಇಫ್ತಾರ್ ಕೂಟ. ಭಾವೈಕ್ಯತೆಯ ಬೆಸುಗೆ ಬೆಸೆದ ಶ್ರೀಗಳು

ನವಲಗುಂದದ ಪಂಚಗೃಹ ಹಿರೇಮಠದಲ್ಲಿ ಇಂದು ಇಫ್ತಾರ್ ಕೂಟ. ಭಾವೈಕ್ಯತೆಯ ಬೆಸುಗೆ ಬೆಸೆದ ಶ್ರೀಗಳು

ನವಲಗುಂದದ ಪಂಚಗ್ರಹ ಹಿರೇಮಠದಲ್ಲಿ ಇಂದು ಪವಿತ್ರ ರಮಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮ್ ಭಾಂದವರಿಗೆ ಇಫ್ತಾರ್ ಕೂಟ ಏರ್ಪಡಿಸಲಾಗಿದೆ.

ಜಾತಿ ಜಾತಿಗಳ ಮಧ್ಯೆ ಸಂಘರ್ಷಗಳು, ಅಸೂಯೆ, ದ್ವೇಷ ಹರಡುತ್ತಿರುವ ಸಂದರ್ಭದಲ್ಲಿ ಷ, ಬ್ರ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಆಸೆಯಂತೆ, ಮಠದ ಉತ್ತರಾಧಿಕಾರಿ ವೀರಬಸವ ದೇವರು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ.

ಸಹೋದರತೆ, ಭಾವೈಕ್ಯತೆ ಬೆಸೆಯುತ್ತ ಬಂದಿರುವ ಶ್ರೀ ಮಠಕ್ಕೆ ಎಲ್ಲ ಧರ್ಮದವರು ಭೇಟಿ ನೀಡಿ ಬರುವ ಸಂಪ್ರದಾಯವಿದೆ. ಇದೇ ಮೊದಲ ಬಾರಿಗೆ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಲಾಗಿದೆ. 

ಇಫ್ತಾರ್ ಕೂಟದಲ್ಲಿ ಭಾಗವಹಿಸುವಂತೆ ನವಲಗುಂದದಲ್ಲಿರುವ ಎಲ್ಲ ಮಸೀದಿಗಳಿಗೆ ಶ್ರೀ ಮಠದಿಂದ ಆಹ್ವಾನ ಪತ್ರ ಕಳಿಸಲಾಗಿದೆ.

ಮಠದಲ್ಲಿ ನಡೆಯಲಿರುವ ಇಫ್ತಾರ್ ಕೂಟದಲ್ಲಿ ನವಲಗುಂದದ ಅಂಜುಮನ್ ಇಸ್ಲಾಮ್ ಸಂಸ್ಥೆಯವರು ಸಿದ್ಧತೆಗಳನ್ನು ಮಾಡುತ್ತಿದ್ದಾರೆ.

ಇಫ್ತಾರ್ ಕೂಟದ ಸಂದರ್ಭದಲ್ಲಿ ನವಲಗುಂದ ಅಂಜುಮನ್ ಸಂಸ್ಥೆಯಿಂದ ಉಭಯ ಶ್ರೀಗಳಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದದ ಪಂಚಗೃಹ ಹಿರೇಮಠದಲ್ಲಿ ಇಂದು ಇಫ್ತಾರ್ ಕೂಟ. ಭಾವೈಕ್ಯತೆಯ ಬೆಸುಗೆ ಬೆಸೆದ ಶ್ರೀಗಳು

ನವಲಗುಂದದ ಪಂಚಗ್ರಹ ಹಿರೇಮಠದಲ್ಲಿ ಇಂದು ಪವಿತ್ರ ರಮಜಾನ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮ್ ಭಾಂದವರಿಗೆ ಇಫ್ತಾರ್ ಕೂಟ ಏರ್ಪಡಿಸಲಾಗಿದೆ. ಜಾತಿ ಜಾತಿಗಳ ಮಧ್ಯೆ ಸಂಘರ್ಷಗಳು, ಅಸೂಯೆ, ದ್ವೇಷ ಹರಡುತ್ತಿರುವ

Live Cricket

error: Content is protected !!