Download Our App

Follow us

Home » ವಿಶ್ವ » ಡೋನಾಲ್ಡ್ ಟ್ರಂಪ್ ಫೋನ್ ಮಾಡಿದ್ರು / ಮೋದಿ

ಡೋನಾಲ್ಡ್ ಟ್ರಂಪ್ ಫೋನ್ ಮಾಡಿದ್ರು / ಮೋದಿ

ಇರಾನ್ ನ ಆಕ್ರಮಣಕಾರಿ ದಾಳಿಯಿಂದ ಕಂಗೆಟ್ಟಿರುವ ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ನೆನಪಾಗಿದ್ದಾರೆ. 

ಇಸ್ರೇಲ್ ಜೊತೆ ಸೇರಿ, ಇರಾನ್ ವಿರುದ್ಧ ಯುದ್ಧ ಸಾರಿದ್ದ ಡೋನಾಲ್ಡ್ ಟ್ರಂಪ್ ಗೆ, ಇರಾನ್ ಕೊಡಬಾರದ ಜಾಗಕ್ಕೆ ಪೆಟ್ಟು ಕೊಡುತ್ತಿದೆ.

ಇದೆಲ್ಲದರ ಮದ್ಯೆ ಪೇಚಿಗೆ ಸಿಲುಕಿರುವ ಡೋನಾಲ್ಡ್ ಟ್ರಂಪ್ ಇವತ್ತು ಸಂಜೆ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಮಾತಾಡಿದ್ದಾರೆ.

ಟ್ರಂಪ್ ಇಂದು ನನಗೆ ಕರೆ ಮಾಡಿದ್ದರು. ನಾವಿಬ್ಬರು, ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಉಪಯುಕ್ತ ಅಭಿಪ್ರಾಯ ವಿನಿಮಯ ಮಾಡಿಕೊಂಡೆವು. 

ಭಾರತವು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಾದಷ್ಟು ಬೇಗ ಬೆಂಬಲಿಸುತ್ತದೆ ಎಂದು ಮೋದಿ ಹೇಳಿದರು.

ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಸ್ಥಳವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇಡೀ ಜಗತ್ತಿಗೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಶಾಂತಿ ಮತ್ತು ಸ್ಥಿರತೆಯತ್ತ ಪ್ರಯತ್ನಗಳ ಕುರಿತು ಸಂಪರ್ಕದಲ್ಲಿರಲು ನಾವು ಒಪ್ಪಿಕೊಂಡೆವು ಎಂದು ಮೋದಿಯವರು ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!