ಬಿಹಾರದ ವಿಧಾನಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆ, ರಾಜಕೀಯ ಜೋರಾಗಿದೆ.
ಒಂದೆಡೆ ರಾಹುಲ್ ಗಾಂಧಿ ಅವರು ಬಿಹಾರದಾಧ್ಯಂತ ಮತಗಳ್ಳತನದ ಕುರಿತು ಸಭೆ ಸಮಾರಂಭಗಳನ್ನು ಮಾಡಿ ಜನರನ್ನು ಜಾಗೃತಗೊಳಿಸುತ್ತಿದ್ದಾರೆ.
ಮತ್ತೊಂದೆಡೆ ಸರ್ಕಾರ ನಡೆಸುತ್ತಿರುವ ನೀತಿಶಕುಮಾರ ನೇತೃತ್ವದ ಎನ್ ಡಿ ಎ ಒಕ್ಕೂಟ ಭರಪುರ ಉಚಿತ ಕೊಡುಗೆಗಳ ಘೋಷಣೆ ಮಾಡುತ್ತಾ, ಮತದಾರರನ್ನು ತನ್ನತ್ತ ಸೆಳೆಯುತ್ತಿದೆ.
ಪ್ರಧಾನಿ ಮೋದಿ ಬಿಹಾರದ ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯ ಯೋಜನೆಯನ್ನು ಪುನರಾರಂಭಿಸಿದ್ದಾರೆ.
ಇದು ಬಿಹಾರದ 5 ಲಕ್ಷ ಪದವೀಧರರಿಗೆ 2 ವರ್ಷಗಳವರೆಗೆ ಮಾಸಿಕ 1000 ರೂ.ಗಳ ವಿದ್ಯಾರ್ಥಿವೇತನ ಮತ್ತು ಉಚಿತ ಕೌಶಲ್ಯ ತರಬೇತಿಯನ್ನು ನೀಡುತ್ತದೆ.

ಉಚಿತ ಕೊಡುಗೆ ಘೋಷಣೆ ಬಗ್ಗೆ ದೆಹಲಿ ಹಾಗೂ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವರೇ ಇದೀಗ ಉಚಿತ ಘೋಷಣೆ ಮಾಡುತ್ತಿದ್ದು, ಇದು ಬಿಹಾರದ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
Author: Karnataka Files
Post Views: 81





