ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೇಸ್ ಸರ್ಕಾರ ಈಗಾಗಲೇ ಎರಡೂವರೆ ವರ್ಷ ಅಧಿಕಾರ ಪೂರೈಸಿದ್ದು, ಕಾಂಗ್ರೇಸ್ ವಲಯದಲ್ಲಿ ನವೆಂಬರ ಕ್ರಾಂತಿ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ನವೆಂಬರ ತಿಂಗಳಲ್ಲಿ ಸಂಪುಟದ ಪುನರ್ ರಚನೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಧಾರವಾಡ ಜಿಲ್ಲೆಯಿಂದ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಹೆಸರು ಹರಿದಾಡುತ್ತಿದೆ.
ಕಾಂಗ್ರೇಸ್ ವಲಯದಲ್ಲಿ ನವೆಂಬರ ಕ್ರಾಂತಿ ನಡೆದಿದ್ದೆ ಆದಲ್ಲಿ ಒಂದು ಕೈ ನೋಡೋಣ ಎಂದು ಕೋನರೆಡ್ಡಿಯವರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ನವಲಗುಂದ ಕಾಂಗ್ರೇಸ್ ಶಾಸಕ ಎನ್ ಎಚ್ ಕೋನರೆಡ್ಡಿ ಜಾಕೆಟ್ ಹಾಕಿಕೊಂಡು ಹೊಸ ಗೆಟೆಪ್ ನಲ್ಲಿ ಕಾಣಿಸಿಕೊಂಡಿದ್ದು, ವಿಧಾನಸೌಧದ ಸುತ್ತ ಒಂದು ಸುತ್ತು ಹಾಕಿ ಬಂದಿದ್ದಾರೆ.
ಜನತಾ ಪರಿವಾರದಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಪ್ತವಲಯದಲ್ಲಿ ಕೋನರೆಡ್ಡಿ ಗುರುತಿಸಿಕೊಂಡಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ ಎಮ್ ಎಫ್ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಒಮ್ಮೆ ಕೋನರೆಡ್ಡಿ ಮಂತ್ರಿಯಾಗ್ತಾರೆ ಎಂದು ಹೇಳಿದ್ದು, ಮೈಲಾರ ಕಾರ್ಣಿಕದಷ್ಟೆ ಈ ಮಾತು ನಿಜ ಆಗತ್ತೆ ಎಂದು ಅವರ ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ.





