ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ದೊಡ್ಡ ಹಗರಣ ನಡೆದಿದೆ. ಒಂದೇ ವರ್ಷದಲ್ಲಿ ಇನ್ನೂರು ಕೋಟಿ ಅಪರಾ ತಪರಾ ನಡೆದಿರುವದು ಬೆಳಕಿಗೆ ಬಂದಿದೆ.
ಕರ್ನಾಟಕ ಫೈಲ್ಸ್ ಗೆ ಧಾಖಲೆಗಳು ಸಿಕ್ಕಿದ್ದು, ಯಾವ ಯಾವ ತಾಲೂಕಿನಲ್ಲಿ, ಯಾರಾರು ಎಷ್ಟೆಷ್ಟು ತಿಂದು ತೇಗಿದ್ದಾರೆ ಅನ್ನೋ ಸುದ್ದಿಯನ್ನು ಬಹಿರಂಗ ಮಾಡಲಿದೆ.
ಲೆಕ್ಕ ಪರಿಶೋಧನಾ ಪ್ರತಿಯಲ್ಲಿ ಧಾಖಲಿಸಿದಂತೆ ಒಂದೇ ವರ್ಷದಲ್ಲಿ ಇನ್ನೂರು ಕೋಟಿ ಸ್ವಾಹಾ ಮಾಡಿದ ಸಂಗತಿ ಬಯಲಾಗಿದೆ.
ಮತ್ತೊಂದೆಡೆ 31 ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿದಂತೆ 5 ಸಾವಿರ ಕೋಟಿಗೂ ಹೆಚ್ಚು ಆಕ್ಷೇಪಣಾ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡುವಂತೆ ಬರೆದ ಪತ್ರ ಕರ್ನಾಟಕ ಫೈಲ್ಸ್ ಗೆ ಸಿಕ್ಕಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಎ ಶ್ರೀನಿಧಿಯವರು ಎಲ್ಲಾ ಜಿಲ್ಲಾ ಪಂಚಾಯತಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ 21-08-2025 ರಂದು ಪತ್ರ ಬರೆದಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ವ್ಯಾಪಕ ಬ್ರಷ್ಟಾಚಾರ ನಡೆದಿದ್ದು, ಜಿಲ್ಲಾ ಪಂಚಾಯತಿಯಲ್ಲಿ ಇರುವ ಅವ್ಯವಹಾರವನ್ನು ಕರ್ನಾಟಕ ಫೈಲ್ಸ್, ಧಾಖಲೆ ಸಮೇತ ಎಳೆ ಎಳೆಯಾಗಿ ಬಿಚ್ಚಿಡಲಿದೆ.





