ಪೇಡಾ ನಗರಿ ಧಾರವಾಡದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೃಹತ್ ಪಥ ಸಂಚಲನ ನಡೆಯಲಿದೆ.
ಪಥ ಸಂಚಲನದ ಹಿನ್ನೆಲೆಯಲ್ಲಿ ಧಾರವಾಡದ ರಸ್ತೆ ಮಾರ್ಗಗಳ ಬದಲಾವಣೆ ಮಾಡಲಾಗಿದ್ದು, ಧಾರವಾಡದಿಂದ ಹೋಗುವ ಹಾಗೂ ವಿವಿಧ ಭಾಗಗಳಿಂದ ಬರುವ ವಾಹನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
ಇಂದು ಮಧ್ಯಾನ್ಹ 2 ಘಂಟೆಯಿಂದ ಸಂಜೆ 7 ಘಂಟೆಯವರೆಗೆ ಜ್ಯುಬಿಲಿ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

Author: Karnataka Files
Post Views: 12





