ಪ್ರೇಮಾನಂದ ಮಹಾರಾಜರು ಅನಾರೋಗ್ಯದಿಂದ ಆಸ್ಪತ್ರೆಗೆ ಧಾಖಲಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಮುಸ್ಲಿಮ್ ಭಾಂಧವರು ದರ್ಗಾಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಮತ್ತೊಂದೆಡೆ ಪ್ರೇಮಾನಂದ ಮಹಾರಾಜರಿಗೆ ಅವಶ್ಯವಿದ್ದರೆ ಕಿಡ್ನಿ ಕೊಡಲು ಸಿದ್ದ ಎಂದು ಬಾಲಿವುಡ್ ನಟ ಎಜಾಜ್ ಖಾನ್ ಹೇಳಿದ್ದಾರೆ.
ಮುಂಬೈನಲ್ಲಿ, ನಟ ಎಜಾಜ್ ಖಾನ್ ಸಂತ ಪ್ರೇಮಾನಂದ ಮಹಾರಾಜ್ ಒಬ್ಬ ಶ್ರೇಷ್ಟ ಸಂತರಾಗಿದ್ದು, ಅವರು ನೂರ್ಕಾಲ್ ಬಾಳಬೇಕು ಎಂದು ಪ್ರಾರ್ಥಿಸಿದ್ದಾರೆ.
ತಮ್ಮ ಮೂತ್ರಪಿಂಡವು ಮಹಾರಾಜ್ ಅವರ ಜೀವವನ್ನು ಉಳಿಸಲು ಸಾಧ್ಯವಾದರೆ, ಅದು ನನ್ನ ಭಾಗ್ಯ ಎಂದು ಎಜಾಜ್ ಖಾನ್ ಹೇಳಿದ್ದಾರೆ.
ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.
Author: Karnataka Files
Post Views: 2





