ಡಿಸೆಂಬರ್ 8 ರಂದು ಖಾನಾಪುರ ತಾಲೂಕಿನ ಅಂಬಡಗಟ್ಟಿಯಲ್ಲಿ ಬಸವಾಭಿಮಾನಿಯೊಬ್ಬರ ಅಪರೂಪದ ಮದುವೆ ನಡೆಯಲಿದೆ.

ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಹಾಂತೇಶ್ ಕುಂಬಾರ ಅವರ ಮದುವೆ ಆರತಿ ಎಂಬುವವರ ಜೊತೆ ನೆರವೇರಲಿದೆ.
ಬಸವಾಭಿಮಾನಿಯಾಗಿರುವ ಮಹಾಂತೇಶ್ ಅವರುತ ಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿದ್ದಾರೆ.

ಆಮಂತ್ರಣ ಪತ್ರಿಕೆಯಲ್ಲಿ ಸಂವಿಧಾನ ಪೀಠಿಕೆ, ವಚನಗಳನ್ನು ಒಳಗೊಂಡ 61 ಪುಟಗಳ ಕಿರುಹೊತ್ತಿಗೆ ಮುದ್ರಿಸಿದ್ದಾರೆ.

ಇದೇ ತಿಂಗಳು 8ರಂದು ಅಂಬಡಗಟ್ಟಿಯ ಕಲ್ಯಾಣ ಮಂಟಪದಲ್ಲಿ ಇವರಿಬ್ಬರು ವಚನ ಮಾಂಗಲ್ಯಕ್ಕೆ ಸಾಕ್ಷಿಯಾಗಲಿದ್ದಾರೆ.
ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಬಸವೇಶ್ವರರ ಭಾವಚಿತ್ರವಿದ್ದು, ವಚನ ಮಾಂಗಲ್ಯ ಎಂದು ಬರೆಯಲಾಗಿದೆ.

ಮೂರನೇ ಪುಟದಲ್ಲಿ ಸಂವಿಧಾನದ ಪೀಠಿಕೆಯನ್ನು ಮುದ್ರಿಸಲಾಗಿದೆ. ಅಲ್ಲದೇ ಲಿಂಗಾಯತ ಸೂತ್ರಗಳು, ಧ್ವಜಗೀತೆಗಳ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ ಅವರ ಭಾವಚಿತ್ರಗಳನ್ನು ಮುದ್ರಿಸಲಾಗಿದೆ.

ವಚನ ಸಾಹಿತ್ಯದ ಅರಿವು ಮೂಡಿಸುತ್ತಲೇ ಹಸೆಮಣೆ ಏರಬೇಕೆಂಬ ಆಸೆ ಮಹಾಂತೇಶ ಅವರದಾಗಿದ್ದು, ಮದುವೆ ತೀರಾ ಸರಳವಾಗಿ ನಡೆಯಲಿದೆ.

ಮೌಡ್ಯ ಆಚರಣೆ ವಿರೋಧಿಸುವ ಮಾಹಿತಿ ಒಳಗೊಂಡ ಅಮಂತ್ರಣ ಪತ್ರಿಕೆ ಸಿದ್ಧಪಡಿಸಿರುವ ಅವರು ಗಮನ ಸೆಳೆಯುತ್ತಿದ್ದಾರೆ.
ಇವರಿಬ್ಬರ ವಿವಾಹ ಕಾರ್ಯಕ್ರಮ ಸಂಪನ್ನವಾಗಿ ನೆರವೇರಲಿ, ಬದುಕು ಬಂಗಾರವಾಗಲಿ ಎಂದು ಹಾರೈಸೋಣ.




