ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ಇಂದು ಕರೆ ಕೊಟ್ಟಿದ್ದ “ಬೃಹತ್” ಹೆಸರಿನ ಪ್ರತಿಭಟನೆ, ನಾ ಚೂಟಿದಂಗ್ ಮಾಡ್ತೀನಿ, ನೀ ಅತ್ತಂಗ್ ಮಾಡು ಅನ್ನೋ ಲೆಕ್ಕದಲ್ಲಿ ಮುಗಿದು ಹೋಗಿದೆ.
ಧಾರವಾಡದಲ್ಲಿ ನಡೆಯುವ ಹೋರಾಟದ ಬಗ್ಗೆ ಎರಡು ದಿನ ಮೊದಲೇ ಮಾತುಕತೆ ಆದಂತೆ ಎಲ್ಲವೂ ನಡೆದು ಹೋಗಿದೆ ಎನ್ನಲಾಗಿದೆ.
ಪ್ರತಿಭಟನೆಯ ಬಿಸಿಯಿಂದ ಭವಿಷ್ಯದ ಬಾಗಿಲು ಏನಾದರೂ ತೆರೆದಿತು ಅನ್ನೋ ಲೆಕ್ಕಾಚಾರದಲ್ಲಿ ಬಂದಿದ್ದ ಆಕಾಂಕ್ಷಿಗಳು ಬಂದ ದಾರಿಗೆ ಸುಂಕ ಇಲ್ಲದಂತೆ ಮನೆಯತ್ತ ಮುಖ ಮಾಡಿದರು.
Author: Karnataka Files
Post Views: 187




