ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಸಮಸ್ಯೆಗಳಿದ್ದು ಅವುಗಳ ಮೇಲೆ ಬೆಳಕು ಚೆಲ್ಲಲು ಎರಡು ದಿವಸ ಶಿಕ್ಷಣದ ಬಗ್ಗೆ ಮಾತ್ರ ಚರ್ಚೆ ಮಾಡಲು ವಿಶೇಷ ಅಧಿವೇಶನ ನಡೆಸಿ ಎಂದು ಬಿಜೆಪಿ ಹಿರಿಯ ಶಾಸಕ ಸುರೇಶಕುಮಾರ ಆಗ್ರಹಿಸಿದರು.
ಸುರೇಶಕುಮಾರರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಎರಡು ದಿನ ಶಿಕ್ಷಣದ ಕುರಿತು ಚರ್ಚಿಸಲು ಅಧಿವೇಶನ ನಡೆಯಲಿ ಎಂದರು.
ಇಂದು ಸದನ ಸೇರುತ್ತಿದ್ದಂತೆ ಶಿಕ್ಷಣ ಸಚಿವರ ಗಮನ ಸೆಳೆದ ಶಾಸಕ ಹರೀಶ್ ಪೂಂಜಾ, ಶಿಕ್ಷಣ ಇಲಾಖೆಯಲ್ಲಿನ ನ್ಯೂನ್ಯತೆ ಕುರಿತು ಮಾತನಾಡಿದರು.
ಇದೇ ವೇಳೆ ಈಗಷ್ಟೆ ಸಾಮಾಜಿಕ ಸಮೀಕ್ಷೆ ಮುಗಿದಿದ್ದು, ಮತ್ತೆ ಜನೆವರಿಯಿಂದ ಕೇಂದ್ರದ ಗಣತಿ ಕಾರ್ಯ ಆರಂಭವಾಗಲಿದೆ. ಶಿಕ್ಷಕರನ್ನು ಬಳಸಿಕೊಳ್ಳುವದರಿಂದ ಭೋಧನೆಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಶಿಕ್ಷಕರನ್ನು ಬಳಸಿಕೊಳ್ಳದಂತೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಮಧು ಬಂಗಾರಪ್ಪ ತಿಳಿಸಿದರು.
Author: Karnataka Files
Post Views: 360





