Download Our App

Follow us

Home » ಕಾನೂನು » ಇನಾಂ ವೀರಾಪುರ ಪ್ರಕರಣ. ಮಾನ್ಯಳನ್ನು ಕೊಂದವರು ಮನುಷ್ಯರಲ್ಲ, ರಾಕ್ಷಸರು / ವಿನೋದ ಅಸೂಟಿ

ಇನಾಂ ವೀರಾಪುರ ಪ್ರಕರಣ. ಮಾನ್ಯಳನ್ನು ಕೊಂದವರು ಮನುಷ್ಯರಲ್ಲ, ರಾಕ್ಷಸರು / ವಿನೋದ ಅಸೂಟಿ

ಕುಂದಗೋಳ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಮರ್ಯಾದಾಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ದಲಿತ ಕುಟುಂಬದವರನ್ನು   ಕಾಂಗ್ರೇಸ್ಸಿನ ಲೋಕಸಭಾ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿಯವರು ಭೇಟಿ ಮಾಡಿ ಸಾಂತ್ವನ ಹೇಳಿದರು.

ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬರ ಆರೋಗ್ಯ ವಿಚಾರಿಸಿ, ಅವರಿಗೆ ಧೈರ್ಯ ತುಂಬಿದರು.

ನಾಗರಿಕ ಸಮಾಜ ತಲೆ ತಗ್ಗಿಸುವಂತ ದುರಂತ ನಡೆದಿದ್ದು, ನನ್ನ ಮನಸ್ಸನ್ನು ಘಾಸಿಗೊಳಿಸಿದೆ ಎಂದ ವಿನೋದ ಅಸೂಟಿ, ಗರ್ಭಿಣಿಯಾಗಿದ್ದ ಮಾನ್ಯ ಳನ್ನು ಕೊಲೆ ಮಾಡಿದವರು ಮನುಷ್ಯರಲ್ಲ, ಅವರು ರಾಕ್ಷಸರು ಎಂದು ಹೇಳಿದರು.

ಮಾನ್ಯಳ ಹತ್ಯೆ ಮಾಡುವ ಮೂಲಕ ಮೃಗಿಯ ವರ್ತನೆ ತೋರಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ದಲಿತ ಕುಟುಂಬದ ರಕ್ಷಣೆಗೆ ಸರ್ಕಾರ ಬದ್ದವಾಗಿದೆ ಎಂದರು.

ಇಂತಹ ಘಟನೆಗಳು ಮತ್ತೆ ಮರಕಳಿಸದಂತೆ ಪ್ರತಿಯೊಬ್ಬರು ಜವಾಬ್ದಾರಿ ವಹಿಸಬೇಕಿದೆ ಎಂದರು. ಇದೇ ವೇಳೆ ಮಾನ್ಯಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದ ವಿನೋದ ಅಸೂಟಿಯವರು, ಮಾನ್ಯಳ ಪತಿ ಹಾಗೂ ಕುಟುಂಬದ ಸದಸ್ಯರಿಗೆ ಭಗವಂತ ನೋವು ತಡೆದುಕೊಳ್ಳುವ ಶಕ್ತಿ ದಯಪಾಲಿಸಲಿ ಎಂದರು. 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಕೀರ ಸನದಿ ಮುಂದುವರಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶಾಕೀರ ಸನದಿಯವರನ್ನು ಮುಂದುವರೆಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಹುಡಾ ಜೊತೆ ಗದಗ, ಹಾವೇರಿ, ಬೆಳಗಾವಿ

Live Cricket

error: Content is protected !!